ಕಾರ್ಕಳ ಬಿಜೆಪಿ ವತಿಯಿಂದ ಶಕ್ತಿ ವಂದನಾ ಕಾರ್ಯಕ್ರಮ

ಕಾರ್ಕಳ : ಭಾರತೀಯ ಜನತಾ ಪಾರ್ಟಿ ಕಾರ್ಕಳ ಮಂಡಲದ ವತಿಯಿಂದ ಮಾ. 6ರಂದು ವಿಕಾಸ ಕಚೇರಿಯಲ್ಲಿ ಶಕ್ತಿ ವಂದನಾ ಕಾರ್ಯಕ್ರಮ ಜರುಗಿತು. ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ಪಶ್ಚಿಮ ಬಂಗಾಳದ ಬರಾಸತ್‌ನಲ್ಲಿ ಮಹಿಳೆಯರನ್ನುದ್ದೇಶಿಸಿ ಮಾತನಾಡುವ ಭಾಷಣವನ್ನು ನೇರ ಪ್ರಸಾರದಲ್ಲಿ ಕಾರ್ಕಳ ತಾಲೂಕಿನ 150 ಮಂದಿ ಮಹಿಳಾ ಫಲಾನುಭವಿಗಳು ವೀಕ್ಷಿಸಿದರು. ಈ ಸಂದರ್ಭದಲ್ಲಿ ಕೇತ್ರಾಧ್ಯಕ್ಷ ನವೀನ್‌ ನಾಯಕ್‌, ಜಿಲ್ಲಾ ಬಿಜೆಪಿ ಪ್ರಧಾನ ಕಾರ್ಯದರ್ಶಿ ರೇಷ್ಮಾ ಉದಯ ಶೆಟ್ಟಿ, ಸಂಚಾಲಕರಾದ ಮಾಲಿನಿ ಜೆ. ಶೆಟ್ಟಿ ಹಾಗೂ ವಿನಯಾ ಡಿ. ಬಂಗೇರ ಉಪಸ್ಥಿತರಿದ್ದರು.













































































error: Content is protected !!
Scroll to Top