ಅಜೆಕಾರು : ಸ್ಕೂಟರ್‌ ವಿದ್ಯುತ್‌ ಕಂಬಕ್ಕೆ ಡಿಕ್ಕಿ – ಗಂಭೀರ ಗಾಯಗೊಂಡಿದ್ದ ಸವಾರ ಸಾವು

ಅಜೆಕಾರು : ಸ್ಕೂಟರ್‌ ವಿದ್ಯುತ್‌ ಕಂಬಕ್ಕೆ ಡಿಕ್ಕಿ ಹೊಡೆದ ಪರಿಣಾಮ ಸವಾರ ಗಂಭೀರ ಗಾಯಗೊಂಡಿದ್ದ ಸವಾರ ಸಾವನಪ್ಪಿದ ಘಟನೆ ಫೆ.13ರಂದು ಸಂಭವಿಸಿದೆ.

ಶಯನ್ ನಾಯಕ್(22) ಎಂಬಾತನು ಫೆ. 11ರಂದು ರಾತ್ರಿ ಕಾರ್ಕಳ ಕಡೆಯಿಂದ ಅಂಡಾರು ಕಡೆಗೆ ತನ್ನ ಹೋಂಡಾ ಸ್ಕೂಟರಿನಲ್ಲಿ ಹೋಗುತ್ತಿರುವಾಗ ರಾತ್ರಿ 1:20 ಗಂಟೆಗೆ ಮರ್ಣೆ ಗ್ರಾಮದ ಕೊಂಬಗುಡ್ಡೆಯ ಬಳಿ ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದಿದ್ದಾರೆ. ಪರಿಣಾಮವಾಗಿ ಶಯನ್ ಸ್ಕೂಟರ್ ಸಮೇತ ರಸ್ತೆಗೆ ಬಿದ್ದಿದ್ದು, ಗಂಭೀರವಾಗಿ ಗಾಯಗೊಂಡಿದ್ದರು. ಗಾಯಾಳುವನ್ನು ಚಿಕಿತ್ಸೆಗಾಗಿ ಮಣಿಪಾಲದ ಕೆ.ಎಂ.ಸಿ. ಆಸ್ಪತ್ರೆಗೆ ದಾಖಲಿಸಲಾಗಿತ್ತು, ಆದರೆ ಚಿಕಿತ್ಸೆ ಫಲಕಾರಿಯಾಗದೆ ಫೆ.13ರ ಮುಂಜಾನೆ ಶಯಾನ್‌ ಸಾವನಪ್ಪಿದ್ದಾರೆ.







































































error: Content is protected !!
Scroll to Top