ಜೈನ ಶ್ರಾವಕ, ಶ್ರಾವಕಿಯರಿಗೆ ರಾಜ್ಯಮಟ್ಟದ ಸ್ಪರ್ಧೆ

ನಾರಾವಿ : ಶ್ರೀಧರ್ಮನಾಥ ಸ್ವಾಮಿ ಬಸದಿಯ ಧಾಮಸಂಪ್ರೋಕ್ಷಣಾ ಪೂರ್ವಕ ಪ್ರತಿಷ್ಠಾ ಮಹೋತ್ಸವದ ಪ್ರಯುಕ್ತ ಮಾರ್ಚ್‌ 22, 23, 24 ರಂದು ರಾಜ್ಯಮಟ್ಟದ ಸಂಗೀತ ಮತ್ತು ಪ್ರಬಂಧ ಸ್ಪರ್ಧೆಯನ್ನು ಜೈನ ಶ್ರಾವಕ, ಶ್ರಾವಕಿಯರಿಗೆ ಏರ್ಪಡಿಸಲಾಗಿದೆ. ಪ್ರಬಂಧದ ವಿಷಯ ಜೈನ ಧರ್ಮದ ಆಚರಣೆಗಳು ಮತ್ತು ವೈಜ್ಞಾನಿಕತೆ, 900 ಶಬ್ದಗಳನ್ನು ಮೀರಿರಬಾರದು. ಕನ್ನಡ ನುಡಿಯಲ್ಲಿ ಟೈಪ್‌ ಮಾಡಿ ಪಿಡಿಎಫ್‌ ಮಾಡಿ ಕಳುಹಿಸತಕ್ಕದ್ದು. ಸಂಗೀತವು ಧರ್ಮನಾಥ ಸ್ವಾಮಿಯ ಹಾಡು ಅಥವಾ ಭಜನೆಯನ್ನು ವಿಡಿಯೋ ಮಾಡಿ ಕಳುಹಿಸಬೇಕು. ಸಮಯ ಕನಿಷ್ಠ 5ನಿಮಿಷ, ಗರಿಷ್ಠ 8ನಿಮಿಷ ವಿಡಿಯೋ ಮತ್ತು ಪ್ರಬಂಧಗಳನ್ನು ಕಳುಹಿಸಲು ಮಾರ್ಚ್‌ 5 ಕೊನೆಯ ದಿನಾಂಕವಾಗಿದೆ.

ಸಂಗೀತ ಸ್ಪರ್ಧೆಯ ವಿಜೇತರಿಗೆ ಪ್ರಥಮ ಬಹುಮಾನ ರೂ.10,000 ನಗದು ಮತ್ತು ಸ್ಮರಣಿಕೆ ಮತ್ತು ದ್ವಿತೀಯ ಬಹುಮಾನ ರೂ.8000 ನಗದು ಮತ್ತು ಸ್ಮರಣಿಕೆ ನೀಡಲಾಗುವುದು.

ಪ್ರಬಂಧ ಸ್ಪರ್ಧೆಯ ವಿಜೇತರಿಗೆ ಪ್ರಥಮ ಬಹುಮಾನ ರೂ. 3000 ನಗದು ಮತ್ತು ಸ್ಮರಣಿಕೆ ಹಾಗೂ ದ್ವಿತೀಯ ಬಹುಮಾನ 2000 ನಗದು ಮತ್ತು ಸ್ಮರಣಿಕೆ ನೀಡಲಾಗುವುದು.

ಪ್ರಬಂಧ ಮತ್ತು ವಿಡಿಯೋವನ್ನು naravibasadi24@gmail.com ಗೆ ಮೇಲ್‌ ಮಾಡಬಹುದು ಅಥವಾ ಹೆಚ್ಚಿನ ಮಾಹಿತಿಗಾಗಿ ಅತುಲ್‌ ಎಸ್.‌ ಸೆಮಿತ – 9481016887, ಜ್ಞಾನೇಂದ್ರ ಕುಮಾರ್‌ ಜೈನ್‌ – 9902799196 ಇವರನ್ನು ಸಂಪರ್ಕಿಸಬಹುದಾಗಿದೆ.













































































error: Content is protected !!
Scroll to Top