ಮನೆಯಲ್ಲಿ ಯಾರೂ ಇಲ್ಲದ ವೇಳೆ ಕೃತ್ಯ : ಕೊಳೆತು ಹೋದ ಮೃತದೇಹ
ಕಾರ್ಕಳ: ಮನೆಯವರು ಇಲ್ಲದ ವೇಳೆ ಅಪರಿಚಿತ ಯುವಕನೊಬ್ಬ ಮನೆಯೊಳಗೆ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಕಾರ್ಕಳ ಕಸಬಾ ಗ್ರಾಮದಲ್ಲಿ ಸಂಭವಿಸಿದೆ. ಕಸಬಾ ಗ್ರಾಮದ ಸ್ವಾತಿ ಎಂಬವರು ಜ.3ರಂದು ಮನೆಗೆ ಬೀಗಹಾಕಿ ಸಾಣೂರಿನಲ್ಲಿರುವ ಮನೆಗೆ ಹೋಗಿದ್ದರು. ಜ.15ರಂದು ದಂದು ನೋಡಿದಾಗ ಮನೆಯ ಬೀಗ ತೆರೆದಿತ್ತು. ಒಳಗೆ ಹೋಗಿ ನೋಡಿದಾಗ ಸುಮಾರು 25 ವರ್ಷದ ಯುವಕನ ಕೊಳೆತ ಸ್ಥಿತಿಯಲ್ಲಿದ್ದ ಮೃತದೇಹ ಬೆಡ್‌ರೂಮ್‌ನಲ್ಲಿ ನೇತಾಡುತ್ತಿತ್ತು. ಪರಿಶೀಲನೆ ನಡೆಸಿದಾಗ ಮೃತ ದೇಹ ಬಂಡೀಮಠ ಕಲ್ಲೊಟ್ಟೆ ನಗರದ ವಿನೀತ್ ಶೆಟ್ಟಿಯವರದ್ದು ಎಂದು ತಿಳಿದು ಬಂದಿದೆ. ಆತ್ಮಹತ್ಯೆಗೆ ಕಾರಣ ಏನೆಂದು ತಿಳಿದಿಲ್ಲ. ಈ ಕುರಿತು ಕಾರ್ಕಳ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.































