ಕಾರ್ಕಳ : ಕಳೆದ ಎರಡು ದಿನಗಳಿಂದ ನಡೆಯುತ್ತಿರುವ 20ನೇ ವರ್ಷದ ಮಿಯ್ಯಾರು ಕಂಬಳ ಅಂತಿಮ ಘಟ್ಟ ತಲುಪಿದ್ದು, ಹಗ್ಗ ಕಿರಿಯ ವಿಭಾಗದಲ್ಲಿ ಶಾಸಕ, ನೆಕ್ಲಾಜೆಗುತ್ತು ಸುನಿಲ್ ಕುಮಾರ್ ಅವರ ಕೋಣಗಳು (ಓಡಿಸಿದವರು : ಬೈಂದೂರು ಮಂಜುನಾಥ) ಪ್ರಥಮ ಸ್ಥಾನ ಪಡೆದವು.
ಬೆಳುವಾಯಿ ಪೆರಾಡಿ ಪುತ್ತಿಗೆಗುತ್ತು ದಿನಕರ ಶೆಟ್ಟಿ (ಓಡಿಸಿದವರು : ಕಾವುರುತೋಟ ಸುದರ್ಶನ್) ಕೋಣಗಳು ಪೈನಲ್ ನಲ್ಲಿ ಕಣದಲ್ಲಿತ್ತು.
ಹಗ್ಗ ಹಿರಿಯ ವಿಭಾಗದಲ್ಲಿ ನಂದಳಿಕೆ ಶ್ರೀಕಾಂತ್ ಭಟ್ ಅವರ ಕೋಣಗಳು ಪ್ರಥಮ, ಕೊಳಕೆ ಇರ್ವತ್ತೂರು ಭಾಸ್ಕರ್ ಕೋಟ್ಯಾನ್ ಅವರ ಕೋಣಗಳು ದ್ವಿತೀಯ ಸ್ಥಾನ ಪಡೆದವು.

ನೇಗಿಲು ಹಿರಿಯ ವಿಭಾಗದಲ್ಲಿ ಬೋಳದಗುತ್ತು ಸತೀಶ್ ಶೆಟ್ಟಿ, ದ್ವಿತೀಯ ಹೊಸ್ಮಾರು ಸೂರ್ಯಶ್ರೀ ರತ್ನಾ ಸದಾಶಿವ ಶೆಟ್ಟಿ ಅವರ ಕೋಣಗಳು ದ್ವಿತೀಯ ಸ್ಥಾನ ಪಡೆದವು.


































