ಕಾರ್ಕಳ : ಆರ್ಥಿಕ ಮುಗ್ಗಟ್ಟಿನಿಂದಾಗಿ ಯುವಕನೋರ್ವ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ಜ. 6 ರ ರಾತ್ರಿ ಸಂಭವಿಸಿದೆ. ದೂಪದಕಟ್ಟೆಯ ಬೇರಂದೊಟ್ಟು ನಿವಾಸಿ ರಂಜಿತ್ (೨೪) ಆತ್ಮಹತ್ಯೆಗೆ ಶರಣಾದವರು. ನಿನ್ನೆ ರಾತ್ರಿಯಿಂದ ಇಂದು ಬೆಳಗ್ಗೆ 6.30ರ ನಡುವೆ ತಮ್ಮ ಕೋಣೆಯೊಳಗೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಕಾರ್ಕಳ ಗ್ರಾಮಾಂತರ ಪೊಲೀಸರು ಘಟನಾ ಸ್ಥಳಕ್ಕೆ ಭೇಟಿ ಪರಿಶೀಲನೆ ನಡೆಸಿದ್ದಾರೆ.
ಆರ್ಥಿಕ ಮುಗ್ಗಟ್ಟು – ಯುವಕ ನೇಣಿಗೆ ಶರಣು































