ಸಾಮಾಜಿಕ ಜಾಲತಾಣ ವಿಭಾಗಕ್ಕೆ ಸಂಚಾಲಕರ ನೇಮಕ
ಬೆಂಗಳೂರು: ಹಿರಿಯ ಪತ್ರಕರ್ತ, ವಿಸ್ತಾರ ನ್ಯೂಸ್ ಸಂಪಾದಕ ಹರಿಪ್ರಕಾಶ್ ಕೋಣೆಮನೆ ಬಿಜೆಪಿ ಪಕ್ಷಕ್ಕೆ ಸೇರ್ಪಡೆಯಾಗಿದ್ದಾರೆ. ಹರಿಪ್ರಕಾಶ್ ಕೋಣೆಮನೆ ಸೇರಿ 11 ಮಂದಿ ವಕ್ತಾರರನ್ನು ಬಿಜೆಪಿ ನೇಮಕ ಮಾಡಿದೆ. ವಿಧಾನ ಪರಿಷತ್ ಮಾಜಿ ಸದಸ್ಯ ಅಶ್ವಥ್ ನಾರಾಯಣ ಮುಖ್ಯ ವಕ್ತಾರರಾಗಿದ್ದು, ಛಲವಾದಿ ನಾರಾಯಣಸ್ವಾಮಿ, ಡಾ.ತೇಜಸ್ವಿನಿ ಗೌಡ, ಕೆ.ಎಸ್ ನವೀನ್, ಎಂ.ಜಿ ಮಹೇಶ್, ಎಚ್.ಎನ್ ಚಂದ್ರಶೇಖರ್, ನರೇಂದ್ರ ರಂಗಪ್ಪ, ಸುರಭಿ ಹೊದಿಗೆರೆ, ಅಶೋಕ್ ಕೆ.ಎಂ ಗೌಡ, ಎಚ್ ವೆಂಕಟೇಶ್ ದೊಡ್ಡೇರಿ ವಕ್ತಾರರಾಗಿ ನಿಯುಕ್ತಿಗೊಂಡಿದ್ದಾರೆ.
ಇದೇ ವೇಳೆ ಹಲವು ವಿಭಾಗಗಳಿಗೆ ಸಂಚಾಲಕ-ಸಹ ಸಂಚಾಲಕರನ್ನು ಬಿಜೆಪಿ ನೇಮಕ ಮಾಡಿದೆ. ಸಾಮಾಜಿಕ ಜಾಲತಾಣ ವಿಭಾಗಕ್ಕೆ ಸಂಚಾಲಕರಾಗಿ ಪ್ರಶಾಂತ್ ಮಾಕನೂರು, ಸಹ ಸಂಚಾಲಕರಾಗಿ ನರೇಂದ್ರ ಮೂರ್ತಿ, ಐಟಿ ವಿಭಾಗದ ಸಂಚಾಲಕರಾಗಿ ನಿತಿನ್ ರಾಜ್ ನಾಯಕ್, ಶ್ಯಾಮಲಾ ರಘುನಂದನ್ ಸಹ ಸಂಚಾಲಕರಾಗಿ ನೇಮಕಗೊಂಡಿದ್ದರೆ, ಮಾಧ್ಯಮ ವಿಭಾಗಕ್ಕೆ ಕರುಣಾಕರ ಖಾಸಲೆ ಸಂಚಾಲಕರಾಗಿ, ಪ್ರಶಾಂತ್ ಕೆಡಂಜಿ ಸಹ ಸಂಚಾಲಕರಾಗಿ ನೇಮಕ ಮಾಡಿ ರಾಜ್ಯಾಧ್ಯಕ್ಷ ಬಿ.ವೈ ವಿಜಯೇಂದ್ರ ಆದೇಶ ಹೊರಡಿಸಿದ್ದಾರೆ.
























