ಕಾರ್ಕಳ : ಮಕ್ಕಳಿಗೆ ಕಿರುಕುಳ ನೀಡಿದ್ದನ್ನು ಪ್ರಶ್ನಿಸಲು ಹೋದ ಪರಿಶಿಷ್ಟ ಸಮುದಾಯದವರನ್ನು ದಾರಿಮಧ್ಯೆ ಅಡ್ಡಗಟ್ಟಿ ಹಲ್ಲೆ ಮಾಡಿ ಜಾತಿ ನಿಂದನೆ ಮಾಡಿದ ಕುರಿತು ಕಾರ್ಕಳ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಸಾಲ್ಮರದ ವಿಠಲ (45) ಎಂಬವರ ಮಕ್ಕಳಿಗೆ ಜರಿಗುಡ್ಡೆಯ ಸುಲೇಮಾನ್ ಎಂಬಾತ ಕಿರುಕುಳ ನೀಡಿದ್ದು, ಇದನ್ನು ಪ್ರಶ್ನಿಸಲು ವಿಠಲ ಅವರು ತನ್ನ ಸಹೋದರ ರಮೇಶ್ ಎಂಬವರ ಜತೆ ಡಿ. 31ರಂದು ಮಧ್ಯಾಹ್ನ 3 ಗಂಟೆ ವೇಳೆಗೆ ಜರಿಗುಡ್ಡೆ ಕಡೆ ಹೋಗುತ್ತಿದ್ದಾಗ ಅಫ್ರೋಜ್ ಮತ್ತು ಸುಲೇಮಾನ್ ಅಡ್ಡಗಟ್ಟಿ ಹಲ್ಲೆ ಮಾಡಿ, ಜಾತಿ ನಿಂದನೆ ಮಾಡಿ ಜೀವ ಬೆದರಿಕೆ ಹಾಕಿದ್ದಾರೆ ಎಂದು ವಿಠಲ ಅವರು ನೀಡಿದ ದೂರಿನಲ್ಲಿ ದಾಖಲಾಗಿದೆ.
ಹೆಬ್ರಿ : ಕಾರು ಡಿಕ್ಕಿಯಾಗಿ ಪಾದಚಾರಿ ಸಾವು
ಹೆಬ್ರಿ: ಕಾರು ಡಿಕ್ಕಿ ಹೊಡೆದು ಪಾದಚಾರಿ ಸಾವಿಗೀಡಾಗಿರುವ ಘಟನೆ ಹೆಬ್ರಿ ಕನ್ಯಾನದ ಕೋಮಲ್ ಫೀಡ್ಸ್ ಸಮೀಪ ಡಿ. 31ರ ರಾತ್ರಿ ಸಂಭವಿಸಿದೆ.
ಸೊರಬ ತಾಲೂಕು ಹುರಳಿಕೊಪ್ಪ ಗ್ರಾಮದ ಅಜಯ್ (27), ಜಯಂತ ಬೋರೋ(25) ಮತ್ತು ಕೂನ್ ಬಸುಮಟಾರಿ ಎಂಬವರು ಕನ್ಯಾನ ಕಡೆಯಿಂದ ಶಿವಪುರ ಮಾರ್ಗದಲ್ಲಿ ನಡೆದುಕೊಂಡು ಕೋಮಲ್ ಫೀಡ್ಸ್ ಕಡೆಗೆ ಹೋಗುತ್ತಿರುವಾಗ ಹಿಂದಿನಿಂದ ಅತಿವೇಗವಾಗಿ ಬಂದ ಇರ್ಫಾನ್ ಖಾದರ್ ಎಂಬವರು ಚಲಾಯಿಸುತ್ತಿದ್ದ ( KA 20 MF 1244) ಕಿಯಾ ಕಾರು ಜಯಂತ ಬೋರೋಗೆ ಡಿಕ್ಕಿ ಹೊಡೆದಿದೆ. ಪರಿಣಾಮವಾಗಿ ರಸ್ತೆಗೆ ಬಿದ್ದು ಅವರ ತಲೆಗೆ ಗಾಯವಾಗಿದ್ದ ಜಯಂತ ಬೋರೋರವರನ್ನು ವಾಹನದಲ್ಲಿ ರಾತ್ರಿ ಹೆಬ್ರಿ ಸರಕಾರಿ ಆಸ್ಪತ್ರೆಗೆ ಕರೆದುಕೊಂಡು ಕರೆತಂದು ವೈದ್ಯರಲ್ಲಿ ತೋರಿಸಿದಾಗ ವೈದ್ಯರು ಪರೀಕ್ಷಿಸಿ ದಾರಿ ಮಧ್ಯೆಯೇ ಮೃತಪಟ್ಟಿರುವುದಾಗಿ ತಿಳಿಸಿರುತ್ತಾರೆ. ಈ ಬಗ್ಗೆ ಹೆಬ್ರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

































