ಕಾರ್ಕಳ : ಆನ್‌ಲೈನ್ ವಂಚನೆಯಿಂದಾಗಿ ಮಹಿಳೆಯೋರ್ವರು 20,10,995 ರೂ. ಕಳೆದುಕೊಂಡ ಘಟನೆ ಅಜೆಕಾರಿನಲ್ಲಿ ಸಂಭವಿಸಿದೆ.
ಮಹಿಳೆ ಬೆಂಗಳೂರಿನ ಕಂಪನಿಯೊಂದರಲ್ಲಿ ಉದ್ಯೋಗ ಹೊಂದಿದ್ದು, ವರ್ಕ್ ಪ್ರಂ ಹೋಂನಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಇವರಿಗೆ ನ. 28 ರಂದು 62896546020640 ನೇ ಮೊಬೈಲ್ ಸಂಖ್ಯೆಯಿಂದ ತಾನು ಮಿಶಾ ಎಂದು ಪರಿಚಯಿಸಿಕೊಂಡು ಇನ್ಸ್ಟಾಗ್ರಾಂ ಖಾತೆಯನ್ನು ಲೈಕ್ ಮಾಡುವಂತೆ ಹಾಗೂ ಸ್ಕ್ರೀನ್ ಶಾಟ್ ಗಳನ್ನು ಶೇರ್ ಮಾಡಿದರೇ ಹಣ ಪಾವತಿಸುವುದಾಗಿ ಹಾಗೂ ಪಾರ್ಟ್ ಟೈಂ ಕೆಲಸ ಕೊಡಿಸುವುದಾಗಿ ಮೇಸೆಜ್ ಬಂದಿತ್ತು. ಅಂತೆಯೇ ಇನ್ಸ್ಟಾಗ್ರಾಂ ನಲ್ಲಿ Viral Bhayani, Filmfare, Instant Bollywood ಎನ್ನುವ ಖಾತೆಗಳ ಲಿಂಕ್ ಕಳುಹಿಸಿ ಖಾತೆಗಳಿಗೆ ಲೈಕ್ ಕೊಟ್ಟು, ಅದರ ಸ್ಕ್ರೀನ್ ಶಾಟ್ ತೆಗೆದು ಮಹಿಳೆ ವಾಟ್ಸಪ್ ನಂಬ್ರಕ್ಕೆ ಕಳುಹಿಸಿಕೊಟ್ಟಿದ್ದರು.
Akriti ಎನ್ನುವ ಹೆಸರಿನಲ್ಲಿರುವ ಟೆಲಿಗ್ರಾಂ ಖಾತೆಗೆ M360 ಎನ್ನುವ Code ನ್ನು ಕಳುಹಿಸುವಂತೆ ತಿಳಿಸಿದಂತೆ ಮಹಿಳೆ Code ನ್ನು ಮೇಸೆಜ್ ಮಾಡಿದ್ದು, ರಿಜಿಸ್ಟರ್ ಮಾಡುವ ಕುರಿತು ವೈಯಕ್ತಿಕ ಮಾಹಿತಿ ಹಾಗೂ ಬ್ಯಾಂಕ್ ಖಾತೆಯ ವಿವರಗಳನ್ನು ಕೇಳಿದಂತೆ ಮಹಿಳೆ ವಿವರಗಳನ್ನು ನೀಡಿದ್ದರು. ನಂತರ ಟೆಲಿಗ್ರಾಂನಲ್ಲಿ task ಎನ್ನುವ ಗ್ರೂಪ್‌ಗೆ ಮಹಿಳೆಯನ್ನು ಸೇರಿಸಿ ಅದರಲ್ಲಿ ಗೂಗಲ್ ಲಿಂಕ್ ಕಳುಹಿಸಿ ರಿವ್ಯೂವ್ ಕೊಡುವಂತೆ ತಿಳಿಸಿದ್ದರು. ಇದೇ ರೀತಿಯ ಬೇರೆ ಬೇರೆ ಟಾಸ್ಕ್‌ಗಳನ್ನು ನೀಡಿದ್ದು, ನಂತರ 1000/- ರೂಪಾಯಿಗೆ 1300/- ರೂಪಾಯಿ, 3000/- ರೂಪಾಯಿಗೆ 3900/- ರೂಪಾಯಿ, 1,75,000/- ರೂಪಾಯಿಗೆ 2,27,000 ರೂಪಾಯಿಯಂತೆ ಇತರೆ ಮೊತ್ತಗಳನ್ನು ನೀಡುವುದಾಗಿ ಮೇಸೆಜ್‌ಗಳನ್ನು ಮಾಡಿದ್ದರು.

ಇದನ್ನು ನಂಬಿದ ಮಹಿಳೆ ನ. 28 ರಂದು 1,000 ರೂ. ಪಾವತಿಸಿದ್ದು, 1,300 ರೂ. ವಾಪಾಸು ಪಡೆದಿದ್ದರು. ಅದೇ ದಿನ 78,000 ರೂ., ನ. 30 ರಂದು 70,000 ರೂ., ಡಿ. 1ರಂದು 2,00,000/ ರೂ., ಡಿ. 2 ರಂದು 3,50,000 ರೂ., ಡಿ. 4 ರಂದು 1,75,000 ರೂ., ಡಿ. 5ರಂದು 4,26,995 ರೂ., ಡಿ. 6ರಂದು 7,10,000 ರೂ. ಮೊತ್ತವನ್ನು ಪಾವತಿಸಿದ್ದರು. zccq.pro ಎನ್ನುವ ವೆಬಸೈಟ್ ಲಿಂಕ್‌ನಲ್ಲಿ ಮಹಿಳೆಯ ಇ-ಮೇಲ್ ಖಾತೆಯಲ್ಲಿ ಕಳುಹಿಸಿದ ಹಣಕ್ಕೆ ಹೆಚ್ಚುವರಿಯಾಗಿ ಹಣ ಸೇರಿಸುತ್ತಿರುವುದು ಕಾಣಿಸಿದ್ದು ಆ ಹಣವನ್ನು ಮಹಿಳೆ ಖಾತೆಗೆ ವರ್ಗಾಯಿಸಲು ಪ್ರಯತ್ನಿಸಿದಾಗ ಹಣ ಖಾತೆಗೆ ಪಾವತಿಯಾಗಿಲ್ಲ.
ಮಹಿಳೆ ಒಟ್ಟು 20,10,995 ರೂ. ಕಳೆದುಕೊಂಡಿದ್ದು, ವಂಚನೆ ಮಾಡಿದ Akriti (User ID-@Mmm996554) ಟೆಲಿಗ್ರಾಂ ಖಾತೆಯ ಬಳಕೆದಾರ, Angelbra (User ID- @an1November) ಟೆಲಿಗ್ರಾಂ ಖಾತೆಯ ಬಳಕೆದಾರ, task (User ID-@Akashhhh0007) ಮತ್ತು +62896546020640ನೇ ವಾಟ್ಸಪ್ ಸಂಖ್ಯೆಯ ಬಳಕೆದಾರ ಹಾಗೂ zccq.pro ವೆಬಸೈಟ್‌ನ ವಿರುದ್ದ ಅಜೆಕಾರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.


































