ಕಾರ್ಕಳ ತಹಶೀಲ್ದಾರ್‌ ಅನಂತಶಂಕರ್‌ ವರ್ಗಾವಣೆ

ನರಸಪ್ಪ ನೂತನ ತಹಶೀಲ್ದಾರ್‌

ಕಾರ್ಕಳ : ಕಾರ್ಕಳ ತಾಲೂಕಿನ ತಹಶೀಲ್ದಾರ್‌ ಬಿ. ಅನಂತಶಂಕರ್‌ ಅವರು ಉತ್ತರ ಕನ್ನಡ ಜಿಲ್ಲೆಯ ಅಂಕೋಲಾ ತಹಶೀಲ್ದಾರ್‌ ಆಗಿ ವರ್ಗಾವಣೆ ಹೊಂದಿದ್ದಾರೆ. ನೂತನ ತಹಶೀಲ್ದಾರ್‌ ಆಗಿ ನರಸಪ್ಪ ಅವರನ್ನು ನಿಯುಕ್ತಿಗೊಳಿಸಿ ಕಂದಾಯ ಇಲಾಖೆಯ ಜಂಟಿ ಕಾರ್ಯದರ್ಶಿ ಅವರು ನ. 18ರಂದು ಆದೇಶ ಹೊರಡಿಸಿರುತ್ತಾರೆ. ಮೂಲತಃ ಮಂಡ್ಯ ಜಿಲ್ಲೆಯ ಅನಂತಶಂಕರ್‌ ಅವರು 2023ರ ಫೆ. 3ರಂದು ಕಾರ್ಕಳ ತಹಶೀಲ್ದಾರ್‌ ಆಗಿ ಅಧಿಕಾರ ಸ್ವೀಕರಿಸಿದ್ದರು.error: Content is protected !!
Scroll to Top