ಕಾರ್ಕಳದಲ್ಲಿ ಭತ್ತದ ಬೆಳೆಗೆ ಕಾಡುತ್ತಿದೆ ಎಲೆ ಸುರುಳಿ ಹಾಗೂ ಕೊಳವೆ ಹುಳ ಬಾಧೆ

ಪ್ರಾಥಮಿಕ ಹಂತದಲ್ಲೇ ಸಮಗ್ರ ಹತೋಟಿ ಕ್ರಮ ಅವಶ್ಯ – ಕೃಷಿ ಇಲಾಖೆ

ಕಾರ್ಕಳ : ತಾಲೂಕಿನೆಲ್ಲೆಡೆ ಭತ್ತದ ಬೆಳೆಯಲ್ಲಿ ಎಲೆ ಸುರುಳಿ ಹುಳ, ಕೊಳವೆ ಹುಳದ ಬಾಧೆ ವ್ಯಾಪಿಸುತ್ತಿದ್ದು ಕೀಟಬಾಧೆಗೆ ಒಳಗಾದ ಭತ್ತದ ಗದ್ದೆ ಸಂರ್ಪೂಣ ನಾಶವಾಗುತ್ತಿದೆ. ಇದನ್ನು ಪಾಥಮಿಕ ಹಂತದಲ್ಲಿಯೆ ಗುರುತಿಸಿ ಸಮಗ್ರ ಹತೋಟಿ ಕ್ರಮ ಕೈಗೊಂಡರೆ ಉತ್ತಮ ಎಂದು ಕೃಷಿ ಇಲಾಖೆ ಪ್ರಕಟನೆಯಲ್ಲಿ ತಿಳಿಸಿದೆ.

ಮಳೆ ತಡವಾಗಿ ಆರಂಭವಾಗಿರುವುದು ಹಾಗೂ ಕಡಿಮೆ ಪ್ರಮಾಣದಲ್ಲಿರುವುದು ಇದಕ್ಕೆ ಪ್ರಮುಖ ಕಾರಣ. ಎಲೆ ಸುರುಳಿ ಕೀಟಗಳು ಆರಂಭದಲ್ಲಿ ಭತ್ತದ ಎಲೆಗಳ ಮೇಲೆ ಮೊಟ್ಟೆಗಳನ್ನಿಡುತ್ತವೆ. ಮೊಟ್ಟೆಯಿಂದ ಹೊರಬಂದ ಮರಿಹುಳಗಳು ತಿಳಿ ಹಸಿರು ಬಣ್ಣದ್ದಾಗಿದ್ದು ಅವುಗಳು ಎಲೆಗಳ ಅಂಚನ್ನು ಒಳಬಾಗಕ್ಕೆ ಸುರುಳಿ ಮಾಡಿಕೊಂಡು ಹಸಿರು ಭಾಗ ಅಥವಾ ಪತ್ರಹರಿತ್ತನ್ನು ತಿನ್ನುತ್ತವೆ. ಇದರಿಂದ ಎಲೆಯ ಮೇಲೆ ಬಿಳಿ ಬಣ್ಣದ ಉದ್ದನೆಯ ಪಟ್ಟಿಗಳು ಕಾಣಿಸಿಕೊಳ್ಳುತ್ತವೆ. ಕ್ರಮೇಣ ಎಲೆ ಒಣಗುತ್ತದೆ. ಇನ್ನು ಗಿಡದಿಂದ ಗಿಡಕ್ಕೆ ಹರಡಿ ಸಂಪೂರ್ಣ ಜಮೀನು ಬೂದು ಬಣ್ಣಕ್ಕೆ ತಿರುಗುತ್ತದೆ. ಹೇರಳ ಪ್ರಮಾಣದಲ್ಲಿ ಮಳೆಯಾದರೆ ಹುಳುಗಳು ಸಾವನ್ನಪುತ್ತವೆ. ಆದರೆ, ಮಳೆ ಕಡಿಮೆ ಇರುವುದು ಹುಳುಗಳ ಬೆಳವಣಿಗೆಗೆ ಪೂರಕವಾಗಿದೆ ಎಂದಿದ್ದಾರೆ.

ನಿರ್ವಹಣಾ ಕ್ರಮಗಳು

  1. ತೆಂಗಿನ ನಾರಿನ ಹಗ್ಗವನ್ನು ಬಾಧಿತ ಭತ್ತದ ಬೆಳೆ ಮೇಲೆ ಎಳೆದಾಡಿ ಹುಳುಗಳ ಮರಿಗಳನ್ನು ನೀರಿಗೆ ಬೀಳಿಸಿ ನಾಶ ಮಾಡಬೇಕು.
  2. ಸಾವಯವ ಕೀಟನಾಶಕ : azadirachtin – 2ಮೀ. ಲೀ.ನ್ನು 1 ಲೀ ನೀರಿಗೆ ಬೆರಸಿ ಸಿಂಪಡಿಸಬೇಕು.
  3. ರಾಸಾಯನಿಕ ಕೀಟನಾಶಕ : chlorantranilipole 0.5 ಮೀ. ಲೀ. ಅಥವಾ chlorpyriphos 2.5.
    ಮೀ. ಲೀ. ಒಂದು ಲೀಟರ್ ನೀರಿಗೆ ಬೆರೆಸಿ ಸಿಂಪಡಿಸಬೇಕು. ಬಾಧೆ ಹೆಚ್ಚಿದ್ದರೆ 20 ದಿವಸಗಳ ಅಂತರದಲ್ಲಿ ಎರಡು ಸಲ ಕೀಟನಾಶಕ ಸಿಂಪರಣೆ ಮಾಡಬೇಕು ಎಂದು ಸಹಾಯಕ ಕೃಷಿ ನಿರ್ದೇಶಕರು ಪ್ರಕಟನೆಯಲ್ಲಿ ತಿಳಿಸಿದ್ದಾರೆ.










































error: Content is protected !!
Scroll to Top