ಕಾರ್ಕಳ : 45ನೇ ಶಾರದಾ ಪೂಜಾ ಉತ್ಸವ : ಅ. 21ರಂದು ಸಮಿತಿಯಿಂದ ಭಾರತ್ ಕ್ವಿಜ್ 2023

ಕಾರ್ಕಳ : ಕಾರ್ಕಳ ಶ್ರೀ ಶಾರದಾ ಪೂಜಾ ಸಮಿತಿ ಮತ್ತು ಮಂಜುನಾಥ ಪೈ ಸಾಂಸ್ಕೃತಿಕ ಫೌಂಡೇಶನ್ ವತಿಯಿಂದ ನಡೆಯುವ 45ನೇ ಶಾರದಾ ಪೂಜಾ ಉತ್ಸವದ ಅಂಗವಾಗಿ ಕಾರ್ಕಳ ತಾಲೂಕು ಮಟ್ಟದ ಭಾರತ ಕ್ವಿಜ್ – 2023 ಸ್ಪರ್ಧೆ ನಡೆಯಲಿರುವುದು. ಅ. 21ರಂದು ಅಪರಾಹ್ನ 2 ಗಂಟೆಯಿಂದ ಶಾರದಾ ಉತ್ಸವದ ವೇದಿಕೆಯಲ್ಲಿ ಈ ಸ್ಪರ್ಧೆ ನಡೆಯಲಿದ್ದು, 6-10ನೇ ತರಗತಿಯ ವಿದ್ಯಾರ್ಥಿಗಳಿಗೆ ಈ ಸ್ಪರ್ಧೆಗೆ ಅವಕಾಶ ಇದೆ ಮತ್ತು ಎರಡು ವಿದ್ಯಾರ್ಥಿಗಳು ಒಂದು ತಂಡವಾಗಿ ಈ ಸ್ಪರ್ಧೆಯಲ್ಲಿ ಭಾಗವಹಿಸಲು ಅವಕಾಶವಿದೆ.

ಭಾರತೀಯ ಸಂಸ್ಕೃತಿ, ಕಲೆ, ಹಿಂದೂ ಧರ್ಮದ ಆಚರಣೆಗಳು, ಸ್ವಾತಂತ್ರ್ಯ ಹೋರಾಟ, ಭಾರತದ ಇತಿಹಾಸ, ದಾಸ ಸಾಹಿತ್ಯ ಮತ್ತು ಪ್ರದರ್ಶನ ಕಲೆಗಳ ಮೇಲೆ ಪ್ರಶ್ನೆಗಳು ಇರುತ್ತವೆ. ಆರಂಭದಲ್ಲಿ ಲಿಖಿತವಾಗಿ ಮತ್ತು ಆಯ್ಕೆಯಾದ ಆರು ತಂಡಗಳಿಗೆ ವೇದಿಕೆಯಲ್ಲಿ ಬಾಯ್ದೆರೆಯಾಗಿ ಈ ಸ್ಪರ್ಧೆ ನಡೆಯಲಿದೆ. ವಿಜೇತ ವಿದ್ಯಾರ್ಥಿಗಳಿಗೆ ನಗದು ಬಹುಮಾನ, ಪ್ರಶಸ್ತಿ ಪತ್ರ ಮತ್ತು ಟ್ರೋಫಿಗಳನ್ನು ಸಮಿತಿಯ ವತಿಯಿಂದ ನೀಡಲಾಗುವುದು ಎಂದು ಸಮಿತಿಯು ಪ್ರಕಟಣೆಯಲ್ಲಿ ತಿಳಿಸಿದೆ. ವಿದ್ಯಾರ್ಥಿಗಳು ಅಕ್ಟೋಬರ್ 20ರ ಮುಂಚಿತವಾಗಿ ಶಾರದೋತ್ಸವದ ಕಚೇರಿಯಲ್ಲಿ ಅಥವಾ 9742384423, 9481511177 ಮೊಬೈಲ್ ಕರೆ ಮಾಡಿ ನೋಂದಣಿ ಮಾಡಿಕೊಳ್ಳಬಹುದು.































error: Content is protected !!
Scroll to Top