ಹೆಬ್ರಿ ತಾಲೂಕಿನ ವಿಪ್ರ ಬಾಂಧವರಿಂದ ಉಡುಪಿ ಶ್ರೀ ಕೃಷ್ಣ ಮಠಕ್ಕೆ ಪಾದಯಾತ್ರೆ

ಹೆಬ್ರಿ : ಸಮಾಜದಲ್ಲಿ ದೇವರ ಅನುಗ್ರಹ, ಧರ್ಮ ಜಾಗೃತಿ ಮತ್ತು ಉತ್ತಮ ಆರೋಗ್ಯ ಲಭಿಸಲಿ ಎಂಬ ಸದುದ್ಧೇಶದಿಂದ ಹೆಬ್ರಿ ತಾಲೂಕಿನ ವಿಪ್ರ ಬಾಂಧವರಿಂದ 12ನೆಯ ಪಾದಯಾತ್ರೆ ಅ. 1ರಂದು ನಡೆಯಿತು.

ಹೆಬ್ರಿ ಶ್ರೀ ಅನಂತಪದ್ಮನಾಭ ಪಾದಯಾತ್ರಾ ಸಮಿತಿ ವತಿಯಿಂದ ನಡೆದ ಈ ಪಾದಯಾತ್ರೆಯು ಗಿಲ್ಲಾಳಿ ವಿಷ್ಣುಮೂರ್ತಿ ಆಚಾರ್ಯ, ಬಲ್ಲಾಡಿ ಚಂದ್ರಶೇಖರ ಭಟ್ ಮತ್ತು ಹೆಬ್ರಿ ಸುದರ್ಶನ್ ಜೋಯಿಸ್ ನೇತೃತ್ವದಲ್ಲಿ ನಡೆಯಿತು. ಶ್ರೀ ಅನಂತಪದ್ಮನಾಭ ದೇವಸ್ಥಾನದಿಂದ ಉಡುಪಿ ಶ್ರೀ ಕೃಷ್ಣ ಮಠಕ್ಕೆ 35 ಕಿ. ಮೀ. ದೂರದ ಪಾದಯಾತ್ರೆಯಲ್ಲಿ ಪಾಲ್ಗೊಂಡ ಪಾದಯಾತ್ರಿಗಳು ದೇವರ ನಾಮಸ್ಮರಣೆ, ವಿಷ್ಣುಸಹಸ್ರನಾಮ ಪಾರಾಯಣವನ್ನು ಪಠಿಸುತ್ತಾ ಪಾದಯಾತ್ರೆ ನಡೆಸಿದರು.

ಪಾಡಿಗಾರ ವಡ್ಡಮೇಶ್ವರ ಮಠದ ಬೆಣ್ಣೆಕೃಷ್ಣ ಮತ್ತು ಪೆರ್ಡೂರು ಶ್ರೀ ಅನಂತಪದ್ಮನಾಭ ದೇವರ ದರ್ಶನವನ್ನು ಪಡೆದು ಹಿರಿಯಡ್ಕ ಸಮೀಪದ ಪುತ್ತಿಗೆ ಮಠಕ್ಕೆ ತೆರಳಿದರು. ಅಲ್ಲಿ ಸುವರ್ಣಾ ನದಿಯಲ್ಲಿ ತೀರ್ಥಸ್ನಾನ ಮಾಡಿ ಶ್ರೀ ವಿಠ್ಠಲ ದೇವರು ಮತ್ತು ಶ್ರೀ ಮುಖ್ಯಪ್ರಾಣ ದೇವರ ದರ್ಶನವನ್ನು ಮಾಡಿ, ಮಹಾಪೂಜೆಯಲ್ಲಿ ಪಾಲ್ಗೊಂಡು ದೇವರ ಪ್ರಸಾದ ಸ್ವೀಕರಿಸಿದರು. ಅನಂತರ ಉಡುಪಿಗೆ ಪಾದಯಾತ್ರೆ ಮುಂದುವರಿಸಿ ಕನಕನ ಕಿಂಡಿ ಮೂಲಕ ದೇವರ ದರ್ಶನ ಮಾಡಿ ಪವಿತ್ರ ಮಧ್ವಸರೋವರದಲ್ಲಿ ತೀರ್ಥಸ್ನಾನ ಮಾಡಿ ಪಾದಯಾತ್ರೆ ಸಮಾಪ್ತಿಗೊಳಿಸಲಾಯಿತು. ಬಳಿಕ ಶ್ರೀ ಚಂದ್ರಮೌಳೀಶ್ವರ, ಶ್ರೀ ಅನಂತೇಶ್ವರ ದೇವರ ದರ್ಶನವನ್ನು ಮಾಡಿ ಶ್ರೀ ಕೃಷ್ಣಮಠಕ್ಕೆ ತೆರಳಿ ದೇವರ ದರ್ಶನ ಪಡೆದರು. ದೇವರ ಪ್ರಸಾದ ಸ್ವೀಕರಿಸಿ, ಪರ್ಯಾಯ ಕೃಷ್ಣಾಪುರ ಮಠದ ಶ್ರೀ ಶ್ರೀ ವಿದ್ಯಾಸಾಗರ ತೀರ್ಥ ಸ್ವಾಮಿಜಿಯವರಿಂದ ಅನುಗ್ರಹ ಮಂತ್ರಾಕ್ಷತೆ ಪಡೆಯಲಾಯಿತು.

ಈ ಪಾದಯಾತ್ರೆಯಲ್ಲಿ ಶ್ರೀಕಾಂತ್ ಭಟ್ ಮುದ್ರಾಡಿ, ರಾಘವೇಂದ್ರ ಭಟ್ ಉಪ್ಪಳ, ನಿತ್ಯಾನಂದ ಭಟ್ ಹೆಬ್ರಿ, ಶ್ರೀಕಾಂತ್ ಓಕುಡ ಕನ್ಯಾನ, ಜನಾರ್ಧನ್ ಬಾಯರಿ ಕಬ್ಬಿನಾಲೆ, ಸುಪ್ರಸನ್ನ ಭಟ್ ಕಬ್ಬಿನಾಲೆ, ಗಿರೀಶ್ ರಾವ್ ಶಿವಪುರ, ರಮ್ಯಾ ಭಟ್ ಬಲ್ಲಾಡಿ, ಶ್ರೀನಿಧಿ ಕಲ್ಕೂರ್ ಉಪ್ಪಳ, ರಮೇಶ್ ವೈಲಾಯ ಕುಚ್ಚೂರು, ಶಂಕರ ಭಟ್ ಹೆರ್ಮುಂಡೆ, ರಾಘವೇಂದ್ರ ಕಲ್ಕೂರ್ ಉಪ್ಪಳ, ಮಂಜುನಾಥ್ ಭಟ್ ಹೆಬ್ರಿ ಸೇರಿದಂತೆ ಸುಮಾರು 30 ಕ್ಕೂ ಹೆಚ್ಚು ಮಂದಿ ಪಾಲ್ಗೊಂಡಿದ್ದರು.













































































error: Content is protected !!
Scroll to Top