ಬಿಜೆಪಿ ಸೇರಿದ ಧರ್ಮಗುರು ವಿರುದ್ಧ ಶಿಸ್ತು ಕ್ರಮ ಕೈಗೊಂಡ ಚರ್ಚ್‌

ಪಕ್ಷ ಸೇರ್ಪಡೆಯಾದ ತಾಸಿನಲ್ಲೇ ಧಾರ್ಮಿಕ ಕರ್ತವ್ಯ ಮಾಡದಂತೆ ಆದೇಶ

ತಿರುವನಂತಪುರ: ಬಿಜೆಪಿ ಸೇರ್ಪಡೆಯಾದ ಚರ್ಚ್‌ನ ಧರ್ಮಗುರುವೊಬ್ಬರನ್ನು ಧಾರ್ಮಿಕ ಕರ್ತವ್ಯಗಳಿಂದ ಬಿಡುಗಡೆಗೊಳಿಸಲಾಗಿದೆ. ಇಡುಕ್ಕಿ ಡಯೊಸಿಸ್‌ನ ಸೈರೊ ಮಲಬಾರ್‌ ಚರ್ಚ್‌ನ ಧರ್ಮಗುರು ಫಾದರ್‌ ಕುರಿಯಾಕೋಸ್‌ ಮಟ್ಟಂ ಸೋಮವಾರ ಬಿಜೆಪಿಗೆ ಸೆರಿದ್ದರು. ಇದರ ಬೆನ್ನಿಗೆ ಧರ್ಮಪ್ರಾಂತದ ಆಡಳಿತ ಅವರನ್ನು ಧಾರ್ಮಿಕ ಕರ್ತವ್ಯಗಳಿಂದ ಬಿಡುಗಡೆಗೊಳಿಸಿ ಆದೇಶ ಹೊರಡಿಸಿದೆ.
ಆದಿಮಾಲಿ ಸಮೀಪದ ಮಂಕುವಾದ ಸೈಂಟ್‌ ಥೋಮಸ್‌ ಚರ್ಚ್‌ನಲ್ಲಿ ಧರ್ಮಗುರುವಾಗಿದ್ದ ಫಾದರ್‌ ಕೊರಿಯಾಕೋಸ್‌ ಇನ್ನುಮುಂದೆ ಚರ್ಚ್‌ನ ಧಾರ್ಮಿಕ ವಿಧಿಗಳನ್ನು ನಡೆಸುವಂತಿಲ್ಲ ಎಂದು ಆದೇಶದಲ್ಲಿ ತಿಳಿಸಲಾಗಿದೆ.
ಡಯೊಸಿಸ್‌ನ ನಿಯಮಗಳ ಪ್ರಕಾರ ಧರ್ಮಗುರುವಾಗಿರುವವರು ಯಾವುದೇ ರಾಜಕೀಯ ಪಕ್ಷ ಸೇರಬಾರದು. ಹೀಗಾಗಿ ಫಾದರ್‌ ಕುರಿಯಾಕೋಸ್‌ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಲಾಗಿದೆ ಎಂದು ಚರ್ಚ್‌ ವಕ್ತಾರ ಹೇಳಿದ್ದಾರೆ. ಮಣಿಪು ಗಲಭೆ ಹಿನ್ನೆಲೆಯಲ್ಲಿ ಕೇರಳದ ಕ್ರೈಸ್ತ ಸಮುದಾಯ ಬಿಜೆಪಿಯನ್ನು ತೀಕ್ಷ್ಣವಾಗಿ ಟೀಕಿಸುತ್ತಿದ್ದು, ಇಂಥ ಸಂದರ್ಭದಲ್ಲಿ ಧರ್ಮಗುರುವೊಬ್ಬರು ಬಿಜೆಪಿ ಸೇರಿರುವುದು ಮುಜುಗರವುಂಟು ಮಾಡಿದೆ ಎನ್ನಲಾಗಿದೆ.

































































































error: Content is protected !!
Scroll to Top