ನೂತನ ಅಧ್ಯಕ್ಷರಾಗಿ ರವಿ ಪೂಜಾರಿ, ಕಾರ್ಯದರ್ಶಿಯಾಗಿ ರಕ್ಷಿತ್
ಕಾರ್ಕಳ : ಜಾರ್ಕಳ ಮುಂಡ್ಲಿ ಬಿಲ್ಲವ ಸಮಾಜ ಸೇವಾ ಸಂಘದ ನೂತನ ಅಧ್ಯಕ್ಷರಾಗಿ ರವಿ ಪೂಜಾರಿ, ಕಾರ್ಯದರ್ಶಿಯಾಗಿ ರಕ್ಷಿತ್ ಆಯ್ಕೆಯಾಗಿದ್ದಾರೆ. ಸೆ. 10 ರಂದು ಮುಂಡ್ಲಿ ಗರಡಿ ಆವರಣದಲ್ಲಿ ನಡೆದ ಸಂಘದ ಮಾಸಿಕ ಸಭೆಯಲ್ಲಿ ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆ ನಡೆದಿತ್ತು. ಸೆ. 24 ರಂದು ನಡೆದ ಗುರುಪೂಜೆ ಮತ್ತು ಸಂಘದ ವಾರ್ಷಿಕ ಸಭೆಯಲ್ಲಿ ಪದಪ್ರದಾನ ಕಾರ್ಯಕ್ರಮ ಜರುಗಿತು. ಉಪಾಧ್ಯಕ್ಷರಾಗಿ ದಿವಾಕರ್ ಪೂಜಾರಿ, ಜತೆ ಕಾರ್ಯದರ್ಶಿಯಾಗಿ ಸುಮಿತ್ ಕುಮಾರ್, ಕೋಶಾಧಿಕಾರಿಯಾಗಿ ಹರಿಕೇಶ್ ಆಯ್ಕೆಯಾಗಿದ್ದಾರೆ. ಸ್ಥಾಪಕಾಧ್ಯಕ್ಷ ಜಗದೀಶ್ ಪೂಜಾರಿ ಪದಪ್ರದಾನ ಮಾಡಿದರು.

ಇದೇ ಸಂದರ್ಭ ಎಸ್ಸೆಸೆಲ್ಸಿಯಲ್ಲಿ ಅತೀ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ಧನ ಹಾಗೂ ಕಾರ್ಯಕ್ರಮದ ಸಲುವಾಗಿ ನಡೆಸಿದ ವಿವಿಧ ಸ್ಪರ್ಧೆಗಳ ವಿಜೇತರಿಗೆ ಬಹುಮಾನ ವಿತರಣೆ ಮಾಡಲಾಯಿತು. ರಕ್ಷಿತ್ ಸ್ವಾಗತಿಸಿ, ರಶ್ಮಿತಾ ಕಾರ್ಯಕ್ರಮ ನಿರೂಪಿಸಿದರು. ಸದಾನಂದ ಕೆ. ಪೂಜಾರಿ ವಂದಿಸಿದರು.

































