ಸಾಣೂರು – ಉಚಿತ ಆರೋಗ್ಯ ತಪಾಸಣಾ ಶಿಬಿರ

ನಿಯಮಿತ ಆರೋಗ್ಯ ತಪಾಸಣೆಯಿಂದ ಮನುಷ್ಯನ ಆರೋಗ್ಯ ಸದೃಢ – ವಿಜಯ ಶೆಟ್ಟಿ

ಕಾರ್ಕಳ : ನಿಯಮಿತ ಆರೋಗ್ಯ ತಪಾಸಣೆಯಿಂದ ಮನುಷ್ಯನ ಆರೋಗ್ಯ ಸದೃಢವಾಗುತ್ತದೆ. ಆದ್ದರಿಂದ ಆರೋಗ್ಯವಂತ ವ್ಯಕ್ತಿ ಕೂಡ ನಿರಂತರ ಅರೋಗ್ಯ ತಪಾಸಣೆ ಮಾಡಿಸುತ್ತಿರಬೇಕು ಎಂದು ಮಂಗಳೂರು ಬಂಟರ ಯಾನೆ ನಾಡವರ ಮಾತೃ ಸಂಘದ ತಾಲೂಕು ಸಂಚಾಲಕ ವಿಜಯ ಶೆಟ್ಟಿ ತಿಳಿಸಿದರು.
ಅವರು ಸಾಣೂರು ಬಂಟರ ಯಾನೆ ನಾಡವರ ಸಂಘದ ನೇತೃತ್ವದಲ್ಲಿ ಡಾ.ಟಿ.ಎಂ.ಎ.ಪೈ. ರೋಟರಿ ಆಸ್ಪತ್ರೆಯ ಸಹಯೋಗದಲ್ಲಿ ಸಾಣೂರು ಶಿವರಾಮ ರೈ ಕಲಾ ವೇದಿಕೆಯಲ್ಲಿ ಸೆ. 26 ರಂದು ನಡೆದ ಉಚಿತ ಆರೋಗ್ಯ ತಪಾಸಣಾ ಶಿಬಿರದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಸಾಣೂರು ಬಂಟರ ಯಾನೆ ನಾಡವರ ಸಂಘದ ಗೌರವ ಸಲಹೆಗಾರ ವಾಸು ಶೆಟ್ಟಿ ಕೆಳಗಿನ ಮನೆ ಕಾರ್ಯಕ್ರಮ ಉದ್ಘಾಟಿಸಿದರು. ಉಚಿತವಾಗಿ ಕನ್ನಡಕ ಕೊಡುಗೆ ನೀಡಿದ ಸುಂದರ ಶೆಟ್ಟಿ ದುಗಬೆಟ್ಟು ಸಾಣೂರು ಸಮಯೋಚಿತವಾಗಿ ಮಾತನಾಡಿದರು. ಡಾ. ವೈಭವ್, ಡಾ. ಯತಾರ್ಥ್, ದತ್ತ ಬಂಟರ ಸಂಘದ ಅಧ್ಯಕ್ಷ ಬಿ. ವಿಶ್ವನಾಥ್ ಶೆಟ್ಟಿ, ಪ್ರಧಾನ ಕಾರ್ಯದರ್ಶಿ ಸುಧಾಕರ್ ಶೆಟ್ಟಿ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಜೊತೆ ಕಾರ್ಯದರ್ಶಿ ಮೋಹನ್ ಶೆಟ್ಟಿ ಕಾರ್ಯಕ್ರಮ ನಿರ್ವಹಿಸಿದರು. 111 ಮಂದಿ ಶಿಬಿರದ ಪ್ರಯೋಜನ ಪಡೆದುಕೊಂಡರು. 52 ಮಂದಿಗೆ ಕನ್ನಡಕ ವಿತರಿಸಲಾಯಿತು ಹಾಗೂ 6 ಮಂದಿಗೆ ಉಚಿತ ಶಸ್ತ್ರ ಚಿಕಿತ್ಸೆಗೆ ವ್ಯವಸ್ಥೆ ಮಾಡಲಾಯಿತು.







































































error: Content is protected !!
Scroll to Top