ಕಾರ್ಕಳ : ಬ್ಲಾಕ್ ಮಹಿಳಾ ಕಾಂಗ್ರೆಸ್ ಸಮಿತಿ ವತಿಯಿಂದ ಕಾಂಗ್ರೆಸ್ ಬೆಂಬಲಿತ ಗ್ರಾ. ಪಂ. ಅಧ್ಯಕ್ಷರು ಹಾಗೂ ಉಪಾಧ್ಯಕ್ಷರಿಗೆ ಸನ್ಮಾನ ಹಾಗೂ ಸಮಿತಿ ಸಭೆ ಸೆ. 12 ರಂದು ಕಾಂಗ್ರೆಸ್ ಕಚೇರಿಯಲ್ಲಿ ನಡೆಯಿತು. ಕೆಪಿಸಿಸಿ ಹಿಂದುಳಿದ ವರ್ಗಗಗಳ ರಾಜ್ಯ ಉಪಾಧ್ಯಕ್ಷ ಡಿ. ಆರ್. ರಾಜು, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸದಾಶಿವ ದೇವಾಡಿಗ, ಉಪಾಧ್ಯಕ್ಷ ಜಾರ್ಜ್ ಕ್ಯಾಸ್ತಲಿನೋ ಮಹಿಳಾ ಕಾಂಗ್ರೆಸ್‌ನನ್ನು ಇನ್ನಷ್ಟು ಸದೃಢವಾಗಿ ಸಂಘಟಿಸುವ ಬಗ್ಗೆ ಸೂಕ್ತ ಸಲಹೆ ಸೂಚನೆಗಳನ್ನು ನೀಡಿದರು.
ಕಾಂಗ್ರೆಸ್ ಬೆಂಬಿಲಿತ ಈದು ಗ್ರಾ. ಪಂ. ಅಧ್ಯಕ್ಷ ಸದಾನಂದ ಪೂಜಾರಿ, ಉಪಾಧ್ಯಕ್ಷೆ ಸುಜಾತ ಕುಲಾಲ್, ಕುಕ್ಕುಂದೂರು ಗ್ರಾ. ಪಂ. ಅಧ್ಯಕ್ಷೆ ಉಷಾ, ಉಪಾಧ್ಯಕ್ಷೆ ಶಶಿಕಲಾ, ಇನ್ನಾ ಗ್ರಾ. ಪಂ. ಅಧ್ಯಕ್ಷೆ ಸರಿತ ಶೆಟ್ಟಿ ಅವರನ್ನು ಸನ್ಮಾನಿಸಲಾಯಿತು.
ಜಿಲ್ಲಾ ಕಾಂಗ್ರೆಸ್ ವಕ್ತಾರ ಬಿಪಿನ್ ಚಂದ್ರಪಾಲ್, ಕಾರ್ಯದರ್ಶಿ ರಾಘವ ದೇವಾಡಿಗ, ಇಂಟಕ್ ಸಮಿತಿಯ ಅಧ್ಯಕ್ಷ ದಿವಾಕರ್ ಮೊಯ್ಲಿ, ತಾ. ಪಂ. ಮಾಜಿ ಅಧ್ಯಕ್ಷ ಪ್ಲೊರಾ ಮೆಂಡೋನ್ಸ, ಹಿಂದುಳಿದ ವರ್ಗ ಸಮಿತಿಯ ಅಧ್ಯಕ್ಷ ಕುಶ ಮೂಲ್ಯ, ಕುಕ್ಕುಂದೂರು ಗ್ರಾಮೀಣ ಸಮಿತಿಯ ಅಧ್ಯಕ್ಷ ಥೋಮಸ್ ಮಸ್ಕರೇನಸ್, ಪುರಸಭಾ ಸದಸ್ಯರಾದ ಪ್ರಭ, ಆರ್.ಜಿ.ಪಿ.ಎಸ್‌ನ ಜಿಲ್ಲಾ ಕಾರ್ಯದರ್ಶಿ ಭಾನು ಬಾಸ್ಕರ್, ಜಿಲ್ಲಾ ಮಹಿಳಾ ಕಾಂಗ್ರೆಸ್ ಉಪಾಧ್ಯಕ್ಷೆ ಮಾಲಿನಿ ರೈ, ಆರೀಫ್ ಕಲ್ಲೊಟ್ಟೆ, ಸೇವಾದಳದ ಅಧ್ಯಕ್ಷ ಅಬ್ದುಲ್ಲಾ, ಸಂಘಟನಾ ಕಾರ್ಯದರ್ಶಿ ಫ್ರಾನ್ಸಿಸ್, ಲಕ್ಷ್ಮಿ, ರೀನಾ ಕ್ಯಾಸ್ಟಲಿನೋ, ಫ್ಲೋರಿನ್, ಲವೀನಾ, ಸರಿತಾ, ಅಮಿತಾ ಶೆಟ್ಟಿ ಹಾಗೂ ಮಹಿಳಾ ಕಾರ್ಯಕರ್ತರು ಉಪಸ್ಥಿತರಿದ್ದರು. ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಅನಿತಾ ಡಿಸೋಜ ಸ್ವಾಗತಿಸಿ, ಶೋಭಾ ಅಂಬಾಪ್ರಸಾದ್ ವಂದಿಸಿದರು.