ಪಡುಬಿದ್ರಿ : ಬಸ್‌ಗೆ ಡಿಕ್ಕಿ ಹೊಡೆದ ಬೈಕ್‌ – ಕಾರ್ಕಳದ ಯುವಕ ಸಾವು

 ಕಾರ್ಕಳ : ಪಡುಬಿದ್ರಿಯಲ್ಲಿ ಖಾಸಗಿ ಬಸ್‌ ಹಾಗೂ ಬೈಕ್‌ ನಡುವೆ ಸೆ. 13ರ ಬೆಳಿಗ್ಗೆ ಡಿಕ್ಕಿ ಸಂಭವಿಸಿದ್ದು, ಪರಿಣಾಮ ಬೈಕ್‌ ಸವಾರ ಅಜೆಕಾರು ಬೊಂಡುಕುಮೇರಿ ನಿವಾಸಿ ಅಶ್ವಿತ್‌ ಶೆಟ್ಟಿ (32) ಸಾವಿಗೀಡಾಗಿದ್ದಾರೆ. ಮಂಗಳೂರಿನಿಂದ ಕಾರ್ಕಳ ಬರುತ್ತಿದ್ದ ನವದುರ್ಗಾ ಬಸ್‌ ಗೆ ಬೈಕ್‌ ಡಿಕ್ಕಿ ಹೊಡೆದಿದೆ. ಗಂಭೀರವಾಗಿ ಗಾಯಗೊಂಡಿದ್ದ ಅಶ್ವಿತ್‌ನನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ಕರೆದೊಯ್ಯುವಾಗ ದಾರಿಮಧ್ಯೆ ಮೃತಪಟ್ಟಿದ್ದಾರೆ.

ಅಜೆಕಾರಿನಲ್ಲಿ ಗೂಡ್ಸ್‌ ಗಾಡಿ ಬಾಡಿಗೆ ನಡೆಸುತ್ತಿದ್ದ ಅಶ್ವಿತ್‌ ಶೆಟ್ಟಿ ತಿಂಗಳ ಹಿಂದೆ ಬೈಕ್‌ನಲ್ಲೇ ಭಾರತ ಪರ್ಯಟನೆ ನಡೆಸಿದ್ದರು.

error: Content is protected !!
Scroll to Top