ಕಾರ್ಕಳ : ಮೂಡುಬಿದಿರೆ ಶೋರಿನ್ ರಿಯೂ ಕರಾಟೆ ಅಸೋಸಿಯೇಶನ್ ಆಶ್ರಯದಲ್ಲಿ ಸ್ವಾಮೀಸ್ ಸ್ಟ್ರೆಂಥ್ ಟ್ರೈನಿಂಗ್ ಎಂ.ಕೆ. ಅನಂತ್ರಾಜ್ ದೈಹಿಕ ಶಿಕ್ಷಣ ಕಾಲೇಜಿನ ಸಹಯೋಗದೊಂದಿಗೆ ಸಮಾಜ ಮಂದಿರದಲ್ಲಿ ಇತ್ತೀಚೆಗೆ ನಡೆದ 20ನೇ ರಾಜ್ಯಮಟ್ಟದ ಕರಾಟೆ ಚಾಂಪಿಯನ್ ಶಿಫ್‌ನಲ್ಲಿ ನಿಟ್ಟೆಯ ಅವಳಿ ಸಹೋದರರಾದ ಆಯುಷ್ ಅರುಣ್ ಕೆ. 15 ವರ್ಷದ ಬ್ರೌನ್ ಬೆಲ್ಟ್ ವಿಭಾಗದಲ್ಲಿ ಪ್ರಥಮ ಸ್ಥಾನ ತಮ್ಮದಾಗಿಸಿಕೊಂಡರೆ, ಅನುಷ್ ಅರುಣ್ ಕೆ. ದ್ವಿತೀಯ ಸ್ಥಾನಿಯಾಗಿದ್ದಾರೆ. ಇವರು ನಿಟ್ಟೆಯ ಅರುಣ್ ಕುಮಾರ್ ಮತ್ತು ಸಂಗೀತಾ ದಂಪತಿ ಪುತ್ರರು. ನಿಟ್ಟೆಯ ಎನ್ಎಸ್ಎಎಂ ಇಂಗ್ಲಿಷ್ ಮೀಡಿಯಂ ಹೈಸ್ಕೂಲ್‌ನಲ್ಲಿ ವಿದ್ಯಾಭ್ಯಾಸ ಪಡೆಯುತ್ತಿದ್ದಾರೆ.
ರಾಜ್ಯಮಟ್ಟದ ಕರಾಟೆ ಸ್ಪರ್ಧೆಯಲ್ಲಿ ನಿಟ್ಟೆಯ ಅವಳಿ ಸಹೋದರರಿಗೆ ಪ್ರಶಸ್ತಿ
