ಶ್ರೀ.ಕ್ಷೇ.ಧ.ಗ್ರಾ.ಯೋ ವತಿಯಿಂದ ಆರೋಗ್ಯ ತಪಾಸಣೆ

ಕಾರ್ಕಳ : ಶ್ರೀ.ಕ್ಷೇ.ಧ.ಗ್ರಾ.ಯೋ.ಬಿ.ಸಿ. ಟ್ರಸ್ಟ್‌ ಕಾರ್ಕಳ ತಾಲೂಕು, ಮಿಯ್ಯಾರು ವಲಯದ ಬಿ ಒಕ್ಕೂಟ ಮತ್ತು ಶೌರ್ಯ ಒಕ್ಕೂಟದ ಜಂಟಿ ಆಶ್ರಯದಲ್ಲಿ ಸೆ. 10 ರಂದು ಉಚಿತ ಆರೋಗ್ಯ ತಪಾಸಣೆ ಮತ್ತು ಮಾಹಿತಿ ಕಾರ್ಯಕ್ರಮ ಜರುಗಿತು. ಆರೋಗ್ಯ ಸಮುದಾಯ ಅಧಿಕಾರಿ ಮೆಹ್ತಾಬ್ ಕಾರ್ಯಕ್ರಮ ಉದ್ಘಾಟಿಸಿದರು. ಪ್ರಾಥಮಿಕ ಆರೋಗ್ಯ ಸುರಕ್ಷಾ ಅಧಿಕಾರಿ ಶ್ಯಾಮಲಾ ಆರೋಗ್ಯ ಕಾಪಾಡಿಕೊಳ್ಳುವಿಕೆಯ ಕುರಿತು ಮಾಹಿತಿ ನೀಡಿದರು. ಮಿಯ್ಯಾರು ವಲಯದ ಶೌರ್ಯ ಪ್ರತಿನಿಧಿ, ಕಾರ್ಕಳ ತಾಲೂಕು ಮಾಸ್ಟರ್ ಸದಾನಂದ ಸಾಲಿಯಾನ್ ಕಾರ್ಯಕ್ರಮ ಅಧ್ಯಕ್ಷತೆ ವಹಿಸಿದ್ದರು. ವಲಯ ಮೇಲ್ವಿಚಾರಕಿ ಯಶೋಧ ಪ್ರಾಸ್ತಾವಿಕವಾಗಿ ಮಾತನಾಡಿದರು. ಶೌರ್ಯ ಮತ್ತು ವಿಪತ್ತು ದಳದ ಸಂಯೋಜಕಿ ಸುರೇಖಾ ಕಾರ್ಯಕ್ರಮ ನಿರೂಪಿಸಿದರು. ಒಕ್ಕೂಟದ ಅಧ್ಯಕ್ಷೆ ವಿನೋದ ನಾಯಕ್ ವಂದಿಸಿದರು.error: Content is protected !!
Scroll to Top