ಕಲ್ಯಾದಲ್ಲಿ ಮೊಸರು ಕುಡಿಕೆ ಕಾರ್ಯಕ್ರಮ – ಕರಾಟೆ ಪಟುಗಳಿಗೆ ಸನ್ಮಾನ

ಕಾರ್ಕಳ : ಕಲ್ಯಾ ಯುವಕ ಮಂಡಲ ಹಾಗೂ ಸುರಭಿ ಮಹಿಳಾ ಮತ್ತು ಯುವತಿ ಮಂಡಲದ ಸಂಯುಕ್ತ ಆಶ್ರಯದಲ್ಲಿ ಕೃಷ್ಣ ಜನ್ಮಾಷ್ಟಮಿಯ ಪ್ರಯುಕ್ತ ನಡೆದ ಮೊಸರು ಕುಡಿಕೆ ಕಾರ್ಯಕ್ರಮದಲ್ಲಿ ಶಿವಮೊಗ್ಗದಲ್ಲಿ ನಡೆದ ಅಂತರರಾಷ್ಟ್ರೀಯ ಕರಾಟೆ ಚಾಂಪಿಯನ್‌ಶಿಪ್‌ನಲ್ಲಿ ಚಿನ್ನ ಹಾಗೂ ಬೆಳ್ಳಿ ಪದಕ ವಿಜೇತ ನಿರೀಕ್ಷಾ , ಹೃತಿಕ್, ರಾಹುಲ್ ಅವರನ್ನು ಸನ್ಮಾನಿಸಲಾಯಿತು.
ಕಾರ್ಯಕ್ರಮದಲ್ಲಿ ಕರಾಟೆ ಗುರು ಶ್ರೀ ಉಮಾಮಹೇಶ್ವರ ಸ್ವಾಮೀಜಿ, ಕಲ್ಯಾ ಶ್ರೀ ಕೊಡಮಣ್ಣಿತ್ತಾಯ ಬ್ರಹ್ಮ ಬೈದರ್ಕಳ ಗರಡಿಯ ಅಧ್ಯಕ್ಷ ಶಶಿಧರ ಕರ್ಕೇರ, ನಿಟ್ಟೆ ಗ್ರಾ. ಪಂ. ಸದಸ್ಯ ಸತೀಶ್ ಪೂಜಾರಿ, ಹಿರಿಯರಾದ ರವಿರಾಜ್ ಉಪಾಧ್ಯಾಯ, ವಿಶ್ವನಾಥ್ ಭಟ್, ಗೋಪಾಲಕೃಷ್ಣ ಭಟ್, ವೆಂಕಟೇಶ್ ಭಟ್, ಸುಧೀರ್ ಶೆಟ್ಟಿ, ಕಲ್ಯಾ ಯುವಕ ಮಂಡಲ ಹಾಗೂ ಸುರಭಿ ಮಹಿಳಾ ಮತ್ತು ಯುವತಿ ಮಂಡಲಿಯ ಪದಾಧಿಕಾರಿಗಳು ಉಪಸ್ಥಿತರಿದ್ದರು.

error: Content is protected !!
Scroll to Top