ಕಾರ್ಕಳ : ಚೈತನ್ಯ ಮಿತ್ರ ಮಂಡಳಿ ಹಾಳೆಕಟ್ಟೆ ಕಲ್ಯಾ, ಚೈತನ್ಯ ಮಹಿಳಾ ಮತ್ತು ಯುವತಿ ಮಂಡಲ ಇವುಗಳ ಸಂಯುಕ್ತ ಆಶ್ರಯದಲ್ಲಿ ಶ್ರೀ ಕೃಷ್ಣ ಲೀಲೋತ್ಸವ ಪ್ರಯುಕ್ತ 21ನೇ ವರ್ಷದ ಸಾಂಸ್ಕೃತಿಕ ಕ್ರೀಡೋತ್ಸವ ಮೊಸರು ಕುಡಿಕೆ ಕಾರ್ಯಕ್ರಮ ಸೆ.10ರಂದು ಕಲ್ಯಾದ ಸರಕಾರಿ ಹಿರಿಯ ಪ್ರಾಥಮಿಕ ಶಾಲಾ ವಠಾರದಲ್ಲಿ ಜರುಗಲಿದೆ. ಧ್ವಜಾರೋಹಣವನ್ನು ಚೈತನ್ಯ ಮಹಿಳಾ ಮತ್ತು ಯುವತಿ ಮಂಡಲದ ಅಧ್ಯಕ್ಷೆ ಶಕುಂತಲಾ ಬಂಗೇರ ನೆರವೇರಿಸಲಿದ್ದಾರೆ
ಹಾಳೆಕಟ್ಟೆ ರಿಕ್ಷಾ ಚಾಲಕ-ಮಾಲಕರ ಸಂಘದ ಅಧ್ಯಕ್ಷ ಸುಭಾಶ್ ಶೆಟ್ಟಿಗಾರ್ ಉದ್ಘಾಟಿಸುತ್ತಾರೆ. ಚೈತನ್ಯ ಮಿತ್ರಮಂಡಳಿಯ ಗೌರವಾಧ್ಯಕ್ಷ ಅಶೋಕ್ ಪೂಜಾರಿ ಅಧ್ಯಕ್ಷತೆ ವಹಿಸಲಿದ್ದಾರೆ. ಮುಖ್ಯ ಅತಿಥಿಯಾಗಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಕಲ್ಯಾ ಅಧ್ಯಕ್ಷ ಗಣಪತಿ ದೇವಾಡಿಗ ಭಾಗವಹಿಸಲಿದ್ದಾರೆ. ಸಾಯಂಕಾಲ 5ಕ್ಕೆ ಸಾಂಸ್ಕೃತಿಕ ಕ್ರೀಡೋತ್ಸವದ ಬಹುಮಾನ ವಿತರಣಾ ಸಮಾರಂಭ ಜರಗಲಿದೆ. ಈ ಕಾರ್ಯಕ್ರಮದಲ್ಲಿ ಪ್ರತಿಭಾ ಪುರಸ್ಕಾರವನ್ನು ಮುನಿಯಾಲು ಉದಯ ಕೃಷ್ಣಯ್ಯ ಶೆಟ್ಟಿ ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷ ಉದಯಕುಮಾರ್ ಶೆಟ್ಟಿ ನೀಡಲಿದ್ದಾರೆ. ಬಹುಮಾನ ವಿತರಣೆಯನ್ನು ಸಾಂಸ್ಕೃತಿಕ ಉಪಸಮಿತಿ ಬಿಲ್ಲವರ ಅಸೋಸಿಯೇಷನ್ ಮುಂಬೈ ಕಾರ್ಯಾಧ್ಯಕ್ಷ ದಯಾನಂದ ಆರ್. ಪೂಜಾರಿ ಮಾಡಲಿದ್ದಾರೆ. ಹಾಳೆಕಟ್ಟೆ ಹಾಲು ಉತ್ಪಾದಕರ ಸಹಕಾರ ಸಂಘ ನಿಯಮಿತ ಅಧ್ಯಕ್ಷ ಸಂಜೀವ ಶೆಟ್ಟಿ ಅಧ್ಯಕ್ಷತೆ ವಹಿಸಲಿದ್ದಾರೆ. ಪ್ರಧಾನ ಉಪಾನ್ಯಾಸಕರಾಗಿ ಅಂಚೆಪಾಲಕರು ಮುನಿಯಾಲು ಆಶಾ ಪ್ರಕಾಶ್ ಕೋಟ್ಯಾನ್ ಭಾಗವಹಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಕಲ್ಯಾ ಗ್ರಾಮ ಪಂಚಾಯತ್ ಸದಸ್ಯರಾದ ಜಗದೀಶ್ ಆಚಾರ್ಯ, ಪ್ರೇಮ ಪೂಜಾರ್ತಿ, ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಎಸ್‌ಡಿಎಂಸಿ ಅಧ್ಯಕ್ಷೆ ಆಶಾ ಪಿ.ಎಸ್ ಉಪಸ್ಥಿತರಿರುತ್ತಾರೆ.
ಶಾಲಾ ಮಕ್ಕಳಿಗೆ ಸಾರ್ವಜನಿಕರಿಗೆ ವಿವಿಧ ಆಟೊಟ ಸ್ಪರ್ಧೆಗಳನ್ನು ನಡೆಸಲಾಗುವುದು. ಸಮಾರೋಪ ಸಮಾರಂಭದ ನಂತರ ಸಾಂಸ್ಕೃತಿಕ ಕಾರ್ಯಕ್ರಮ ಜರುಗಲಿದೆ ಎಂದು ಪ್ರಕಟಣೆ ತಿಳಿಸಿದೆ.
ಸೆ.10: ಚೈತನ್ಯ ಮಿತ್ರ ಮಂಡಳಿ ಸಾಂಸ್ಕೃತಿಕ ಕ್ರೀಡೋತ್ಸವ, ಮೊಸರು ಕುಡಿಕೆ
