ಎಕ್ಸಲೆಂಟ್‌ ಕಾಲೇಜಿನಲ್ಲಿ “ಮೌಲ್ಯ” ಸ್ಮರಣ ಸಂಚಿಕೆ ಅನಾವರಣ

ಮೌಲ್ಯಾಧಾರಿತ ಶಿಕ್ಷಣದಿಂದ ಸ್ವಸ್ಥ ಸಮಾಜ ನಿರ್ಮಾಣ – ಭೋಜೇಗೌಡ

ಮೂಡಬಿದಿರೆ : ಶಿಕ್ಷಣ ಮತ್ತು ಆರೋಗ್ಯ ಸ್ವಸ್ಥ ಸಮಾಜದ ಅನಿವಾರ್ಯತೆ. ಸಮಾಜದ ಕಟ್ಟ ಕಡೆಯ ವ್ಯಕ್ತಿಯೂ ಇವೆರಡನ್ನು ಹೊಂದಿದಾಗ ಮಾತ್ರ ಬಲಿಷ್ಠ ಸಮಾಜದ ನಿರ್ಮಾಣವಾಗಲು ಸಾಧ್ಯ. ಪಠ್ಯ ಶಿಕ್ಷಣದ ಜೊತೆಗೆ ಜೀವನ ಮೌಲ್ಯಾಧಾರಿತ ಶಿಕ್ಷಣದಿಂದ ಸುಶಿಕ್ಷಿತ, ಸಂಸ್ಕಾರಯುತ ಸಮಾಜ ನಿರ್ಮಾಣವಾಗುತ್ತದೆ. ತನ್ಮೂಲಕ ಕಟ್ಟುವೆವು ನಾವು ರಸದ ಬೀಡನು ಎಂಬ ಅಡಿಗರ ಸದಭಿಮಾನದ ಸ್ವಗತಕ್ಕೆ ಅರ್ಥಪೂರ್ಣತೆ ಕೊಡಲು ಸಾಧ್ಯ ಎಂದು ವಿಧಾನ ಪರಿಷತ್ ಶಾಸಕ ಭೋಜೇಗೌಡ ಅಭಿಪ್ರಾಯಪಟ್ಟರು.

ಅವರು ಮೂಡಬಿದಿರೆ ಎಕ್ಸಲೆಂಟ್ ಪದವಿ ಪೂರ್ವ ಕಾಲೇಜಿನಲ್ಲಿ ದಶಮ ಸಂಭ್ರಮದ ಸ್ಮರಣ ಸಂಚಿಕೆ “ಮೌಲ್ಯ” ಬಿಡುಗಡೆಗೊಳಿಸಿ ಮಾತನಾಡಿದರು. ಶಿಕ್ಷಣ ಎಂದರೆ ಪಾತ್ರವನ್ನು ತುಂಬಿದ ಹಾಗಲ್ಲ ದೀಪವನ್ನು ಹಚ್ಚಿ ಬೆಳಗಿದಂತೆ ಯಶಸ್ವಿ ನಾಯಕತ್ವ ಅನುಭವೀ ಉಪನ್ಯಾಸಕ ವೃಂದ, ಸುಸಜ್ಜಿತ ಕಟ್ಟಡ, ವಾಚಾನಾಲಯ, ಕ್ರೀಡಾಂಗಣ ಸಂಸ್ಕಾರ ಸಾರುವ ಆಚರಣೆಗಳು ವಿದ್ಯಾರ್ಥಿಗಳ ಸೃಜನಶೀಲತೆ ಅರಳಿಸುವ ಕಾರ್ಯಾಗಾರಗಳು ಒಂದು ಯಶಸ್ವೀ ವಿದ್ಯಾಸಂಸ್ಥೆಯ ಲಕ್ಷಣಗಳು. ಈ ನಿಟ್ಟಿನಲ್ಲಿ ಎಕ್ಸಲೆಂಟ್ ವಿದ್ಯಾಸಂಸ್ಥೆ ಪೂರ್ಣತೆಯನ್ನು ಹೊಂದಿದೆ ಎಂದು ಶ್ಲಾಘಿಸಿದರು.

ಸಭೆಯ ಅಧ್ಯಕ್ಷತೆ ವಹಿಸಿದ್ದ ಸಂಸ್ಥೆಯ ಅಧ್ಯಕ್ಷ ಯುವರಾಜ್‌ಜೈನ್ ವಿದ್ಯಾರ್ಥಿಗಳ ವಾಚನ ಮತ್ತು ಗ್ರಹಿಕಾ ಕೌಶಲಕ್ಕೆ ಉತ್ತೇಜನ ನೀಡುವಂತಜ ಕಾರ್ಯಕ್ರಮಗಳನ್ನು ಸಂಸ್ಥೆಯಲ್ಲಿ ನಡೆಸಲಾಗುತ್ತದೆ. ವಿದ್ಯಾರ್ಥಿಗಳ ಸರ್ವಾಂಗೀಣ ಬೆಳವಣೆಗೆಗೆ ಪೂರಕವಾದ ವಾತಾವರಣವನ್ನು ಸಂಸ್ಥೆಯಲ್ಲಿ ರೂಪಿಸಲಾಗಿದೆ ಎಂದರು.

ಸಂಸ್ಥೆಯ ಕಾರ್ಯದರ್ಶಿ ರಶ್ಮಿತಾ ಯುವರಾಜ್‌ ಜೈನ್, ಆಡಳಿತ ನಿರ್ದೇಶಕ ಡಾ. ಸಂಪತ್‌ ಕುಮಾರ್, ಪ್ರಾಂಶುಪಾಲ ಪ್ರದೀಪ್‌ ಕುಮರ್ ಶೆಟ್ಟಿ, ಪ್ರೌಢಶಾಲಾ ಮುಖ್ಯ ಶಿಕ್ಷಕ ಶಿವಪ್ರಸಾದ್ ಭಟ್, ಆಡಳಿತಾಧಿಕಾರಿ ಹರೀಶ್ ಶೆಟ್ಟಿ ಉಪಸ್ಥಿತರಿದ್ದರು. ಉಪನ್ಯಾಸಕ ಡಾ. ವಾದಿರಾಜ್‌ ಕಲ್ಲೂರಾಯ ಕಾರ್ಯಕ್ರಮ ನಿರೂಪಿಸಿದರು.



































































































error: Content is protected !!
Scroll to Top