ಅಮೃತ ಭಾರತಿಯಲ್ಲಿ ರಕ್ಷಾ ಬಂಧನ ಆಚರಣೆ

ಹೆಬ್ರಿ : ಪಾಂಡುರಂಗ ರಮಣ ನಾಯಕ್‌ ಅಮೃತ ಭಾರತಿ ಪದವಿ ಪೂರ್ವ ಕಾಲೇಜಿನಲ್ಲಿ ಹೆಬ್ರಿಯ ನಕ್ಸಲ್‌ ನಿಗ್ರಹ ದಳ ಮತ್ತು ಆರಕ್ಷಕ ಠಾಣೆಯ ಸಹಯೋಗದಲ್ಲಿ ರಕ್ಷಾಬಂಧನ ಕಾರ್ಯಕ್ರಮ ಆ. 30 ರಂದು ಜರುಗಿತು.

ಮುಖ್ಯ ಅತಿಥಿಯಾಗಿ ಭಾಗವಹಿಸಿದ ವಿದ್ವಾನ್ ವೇದವ್ಯಾಸ ತಂತ್ರಿ ಮಡಾಮಕ್ಕಿ ಮಾತನಾಡಿ, ಭಾರತ ದೇಶದಲ್ಲಿ ಆಚರಿಸುವ ಪ್ರತಿಯೊಂದು ಹಬ್ಬಕ್ಕೂ ಅದರದ್ದೇ ಆದ ಧಾರ್ಮಿಕ ಹಾಗೂ ವೈಜ್ಞಾನಿಕ ಹಿನ್ನೆಲೆಯಿದೆ. ರಕ್ಷಾ ಬಂಧನ ಆಚರಣೆಯೊಂದಿಗೆ ಯುವಜನತೆ ತ್ಯಾಗ, ರಕ್ಷಣೆ ಮತ್ತು ಜವಬ್ದಾರಿಯ ಗುಣಗಳನ್ನು ತಮ್ಮ ಜೀವನದಲ್ಲಿ ಮೈಗೂಡಿಸಿಕೊಳ್ಳಬೇಕು ಎಂದು ಹೇಳಿದರು.
ಟ್ರಸ್ಟಿನ ಕಾರ್ಯದರ್ಶಿ ಗುರುದಸ್ ಶೆಣೈ, ಶೋಧನ್ ಹೆಗ್ಡೆ, ಪ್ರಾಂಶುಪಾಲ ಅಮರೇಶ್‌ ಕುಮಾರ್ ಹೆಗ್ಡೆ, ಶಾಲಾ ಮೇಲ್ವಿಚಾರಕ ರಾಘವೇಂದ್ರಉಪಸ್ಥಿತರಿದ್ದರು. ಕನ್ನಡ ಭಾಷಾ ಉಪನ್ಯಾಸಕ ವೀಣೇಶ್‌ ಅಮೀನ್‌ ಕಾರ್ಯಕ್ರಮ ನಿರ್ವಹಿಸಿದರು.































































































error: Content is protected !!
Scroll to Top