ಬೈಲೂರು ಗ್ರಾ. ಪಂ. ಅಧ್ಯಕ್ಷರಾಗಿ ಸುಜಾತ ಪೂಜಾರಿ – ಉಪಾಧ್ಯಕ್ಷರಾಗಿ ಸಂತೋಷ್‌ ಸಾಲಿಯಾನ್‌

ಕಾರ್ಕಳ : ಬೈಲೂರು ಗ್ರಾ. ಪಂ. ಅಧ್ಯಕ್ಷರಾಗಿ ಸುಜಾತ ಪೂಜಾರಿ ಹಾಗೂ ಉಪಾಧ್ಯಕ್ಷರಾಗಿ ಸಂತೋಷ್‌ ಸಾಲಿಯಾನ್‌ ಅವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಆ. 19 ರಂದು ಚುನಾವಣಾ ಪ್ರಕ್ರಿಯೆ ನಡೆದಿದ್ದು, ತೋಟಗಾರಿಕಾ ಇಲಾಖೆಯ ಹಿರಿಯ ಸಹಾಯಕ ನಿರ್ದೇಶಕ ಬಿ. ವಿ. ಶ್ರೀನಿವಾಸ್ ಚುನಾವಣಾಧಿಕಾರಿಯಾಗಿ ಕಾರ್ಯನಿರ್ವಹಿಸಿದರು. 14 ಮಂದಿ ಸದಸ್ಯರಿರುವ ಬೈಲೂರು ಪಂಚಾಯತ್‌ ನಲ್ಲಿ 11 ಮಂದಿ ಬಿಜೆಪಿ ಬೆಂಬಲಿತ, ಓರ್ವರು ಕಾಂಗ್ರೆಸ್‌ ಬೆಂಬಲಿತ ಹಾಗೂ ಇಬ್ಬರು ಪಕ್ಷೇತರರಿದ್ದಾರೆ. ಅಧ್ಯಕ್ಷ ಸ್ಥಾನ ಹಿಂದುಳಿದ ವರ್ಗ ಎ ಹಾಗೂ ಉಪಾಧ್ಯಕ್ಷ ಸ್ಥಾನ ಸಾಮಾನ್ಯ ಕೆಟಗರಿಗೆ ಮೀಸಲಾತಿ ನಿಗದಿಯಾಗಿತ್ತು.







































































error: Content is protected !!
Scroll to Top