ಅಪರಾಧ – ಅಪಘಾತ

ಕಾರುಗಳ ಡಿಕ್ಕಿ : ಮೂವರಿಗೆ ಗಾಯ

ಕಾರ್ಕಳ: ಮಾಳ ಘಾಟಿಯಲ್ಲಿ ಆ. 14 ರಂದು ಕಾರುಗಳು ಡಿಕ್ಕಿ ಹೊಡೆದು ಚಾಲಕ ಸೇರಿ ಮೂವರಿಗೆ ಸಣ್ಣಪುಟ್ಟ ಗಾಯಗಳಾಗಿವೆ. ಆಲ್ವಿನ್ ಅವಿನಾಶ್ ರೆಗೊ ಎಂಬವರು ಮಂಗಳೂರಿನಿಂದ ಎಸ್‌ಕೆ ಬಾರ್ಡರ್ ಕಡೆಗೆ ಚಲಾಯಿಸಿಕೊಂಡು ಹೋಗುತ್ತಿದ್ದ ಸ್ಕಾರ್ಪಿಯೊ ಕಾರಿಗೆ ಕಾರ್ಕಳ ಕಡೆಗೆ ಬರುತ್ತಿದ್ದ ಸ್ವಿಫ್ಟ್‌ ಕಾರು ಡಿಕ್ಕಿ ಹೊಡೆದು ಎರಡೂ ಕಾರುಗಳು ಜಖಂಗೊಂಡಿವೆ. ಸ್ಕಾರ್ಪಿಯೊದಲ್ಲಿದ್ದ ರೆಗೊ ಮತ್ತಿಬ್ಬರು ಗಾಯಗೊಂಡಿದ್ದಾರೆ. ಸ್ವಿಫ್ಟ್‌ ಕಾರಿನ ಚಾಲಕನ ಅತಿ ವೇಗ ಮತ್ತು ನಿರ್ಲಕ್ಷ್ಯದ ಚಾಲನೆ ಅಪಘಾತಕ್ಕೆ ಕಾರಣ ಎಂದು ಕಾರ್ಕಳ ಗ್ರಾಮಾಂತರ ಠಾಣೆಯಲ್ಲಿ ದೂರು ದಾಖಲಾಗಿದೆ.

ಸ್ಕೂಟಿಗೆ ಬಸ್‌ ಡಿಕ್ಕಿ : ಸವಾರನಿಗೆ ಗಾಯ

ಕಾರ್ಕಳ
: ಮುಂಡ್ಕೂರು ಸಮೀಪ ಜಾರಿಗೆಕಟ್ಟೆ ಜಂಕ್ಷನ್‌ನಲ್ಲಿ ಸ್ಕೂಟಿಗೆ ಬಸ್‌ ಡಿಕ್ಕಿ ಹೊಡೆದು ಸ್ಕೂಟಿ ಸವಾರ ಅರುಣ್‌ ಎಂಬವರು ಗಾಯಗೊಂಡ ಘಟನೆ ಆ. 14ರ ಸಂಜೆ ಸಂಭವಿಸಿದೆ. ಇನ್ನಾ-ಪಡುಬಿದ್ರಿ-ಸಚ್ಚೇರಿಪೇಟೆ ರಸ್ತೆಯಲ್ಲಿ ಸತ್ಯ ಸಾಯಿ ಸೇವಾ ಕ್ಷೇತ್ರದ ಬೋರ್ಡ್‌ ಬಳಿ ಬೆಳ್ಮಣ್‌ಗೆ ಬರುತ್ತಿದ್ದ ಶ್ರೀದೇವಿ ಬಸ್‌ ಓವರ್ಟೇಕ್‌ ಮಾಡುವ ಭರದಲ್ಲಿ ಸ್ಕೂಟಿಗೆ ಡಿಕ್ಕಿ ಹೊಡೆದಿದೆ. ರಸ್ತೆಗೆ ಬಿದ್ದ ಸ್ಕೂಟಿ ಸವಾರ ಗಾಯಗೊಂಡಿದ್ದಾರೆ. ಬಸ್‌ ಚಾಲಕನ ಅತಿ ವೇಗದ ಮತ್ತು ಅಜಾರೂಕ ಚಾಲನೆಯಿಂದ ಅಪಘಾತ ಸಂಭವಿಸಿದೆ ಎಂದು ಕಾರ್ಕಳ ಗ್ರಾಮಾಂತರ ಠಾಣೆಯಲ್ಲಿ ದೂರು ದಾಖಲಾಗಿದೆ.

ಸಾಲದ ತಗಾದೆ : ಮನೆಗೆ ನುಗ್ಗಿ ಹಲ್ಲೆ

ಕಾರ್ಕಳ : ಕುಕ್ಕುಂದೂರು ಗ್ರಾಮದ ಅಯ್ಯಪ್ಪನಗರ ಗರಡಿ ಬಳಿ ವಾಸವಾಗಿರುವ ಆನಂದ ಎಂಬವರ ಮನೆಗೆ ಭಾನುವಾರ ವಿಶ್ವನಾಥ, ಸಂಜೀವ, ಮಂಜುನಾಥ, ಪ್ರೇಮ ಮತ್ತು ವಿಶಾಲ ಎಂಬವರು ನುಗ್ಗಿ ಆನಂದ ಮತ್ತು ಅವರ ಹೆಂಡತಿ ಮೇಲೆ ಹಲ್ಲೆ ಮಾಡಿರುವ ಕುರಿತು ದೂರು ದಾಖಲಾಗಿದೆ. ಆನಂದ ಅವರ ಹೆಂಡತಿ ಸರೋಜಾ ವಿಶ್ವಕರ್ಮ ಬ್ಯಾಂಕಿನಿಂದ ಸಾಲ ಪಡೆದಿದ್ದು, ಆರೋಪಿ ವಿಶ್ವನಾಥ ಸಹ ಇದೇ ಬ್ಯಾಂಕಿನಲ್ಲಿ ಸಾಲ ಪಡೆದುಕೊಂಡಿದ್ದರು. ಈ ಸಾಲದ ತಗಾದೆಯೇ ಹಲ್ಲೆಗೆ ಕಾರಣ ಎನ್ನಲಾಗಿದೆ. ಕಾರ್ಕಳ ನಗರ ಠಾಣೆಯಲ್ಲಿ ಕೇಸು ದಾಖಲಾಗಿದೆ.

ಪ್ರತಿದೂರು
ವಿಶ್ವನಾಥ ವಿಶ್ವಕರ್ಮ ಗ್ರೂಪ್‌ನ ಅಧ್ಯಕ್ಷರಾಗಿದ್ದು, ಸಾಲದ ಕಂತು ಪಾವತಿಯಾಗದ ಹಿನ್ನೆಲೆಯಲ್ಲಿ ಮನೆಗೆ ವಿಚಾರಿಸಲು ಹೋದಾಗ ಆನಂದ ಮತ್ತು ಅವರ ಹೆಂಡತಿ ಅವಾಚ್ಯವಾಗಿ ನಿಂದಿಸಿ ಕೊಲೆ ಬೆದರಿಕೆ ಹಾಕಿದ್ದಾರೆ ಎಂದು ವಿಶ್ವನಾಥ ಅವರ ಹೆಂಡತಿ ಸುಶೀಲ ಪ್ರತಿದೂರು ದಾಖಲಿಸಿದ್ದಾರೆ.







































































error: Content is protected !!
Scroll to Top