ಕಾರ್ಕಳ ಬಿಜೆಪಿಯಿಂದ ಇಬ್ಬರು ಗ್ರಾ. ಪಂ. ಸದಸ್ಯರ ಉಚ್ಛಾಟನೆ

ಕಾರ್ಕಳ : ಭಾರತೀಯ ಜನತಾ ಪಾರ್ಟಿಯ ಬೆಂಬಲಿತ ನಿಟ್ಟೆ ಗ್ರಾಮ ಪಂಚಾಯತ್‌ನ ಸದಸ್ಯ ಸುಭಾಶ್‌ ಚಂದ್ರ ಹೆಗ್ಡೆ ಹಾಗೂ ಮುದ್ರಾಡಿ ಗ್ರಾ. ಪಂ. ಸದಸ್ಯ ಶುಭದರ್‌ ಮುದ್ರಾಡಿ ಅವರನ್ನು ಪಕ್ಷದಿಂದ ಉಚ್ಛಾಟನೆ ಮಾಡಲಾಗಿದೆ. ವಿಧಾನ ಸಭಾ ಚುನವಾಣೆಯ ಸಂದರ್ಭ ಪಕ್ಷದ ಅಧಿಕೃತ ಅಭ್ಯರ್ಥಿ ವಿರುದ್ಧ ಮತಪ್ರಚಾರ ಮಾಡುವ ಮೂಲಕ ಪಕ್ಷಕ್ಕೆ ಅಗೌರವ ಹಾಗೂ ಪಕ್ಷದ ನಿಯಮಗಳ ಉಲ್ಲಂಘನೆ ಮಾಡಿದ್ದಾರೆ. ಈ ಅಶಿಸ್ತಿನ ನಿಲುವನ್ನು ಪಕ್ಷ ವಿರೋಧಿ ಚಟುವಟಿಕೆ ಎಂದು ಪರಿಗಣಿಸಿ ಅವರನ್ನು ಪಕ್ಷದಿಂದ ಉಚ್ಛಾಟನೆ ಮಾಡಲಾಗಿದೆ ಎಂದು ಬಿಜೆಪಿ ಕ್ಷೇತ್ರಾಧ್ಯಕ್ಷ ಮಹಾವೀರ ಹೆಗ್ಡೆ ಪ್ರಕಟನೆಯಲ್ಲಿ ತಿಳಿಸಿದ್ದಾರೆ.















































































error: Content is protected !!
Scroll to Top