ಹಾಕಿ ಏಷ್ಯನ್ ಚಾಂಪಿಯನ್ಸ್ : ಮಲೇಷಿಯಾವನ್ನು ಸೋಲಿಸಿ 4ನೇ ಬಾರಿಗೆ ಟ್ರೋಫಿ ಮುಡಿಗೇರಿಸಿಕೊಂಡ ಭಾರತ

ಚೆನ್ನೈ : ಮೇಯರ್ ರಾಧಾಕೃಷ್ಣನ್ ಹಾಕಿ ಸ್ಟೇಡಿಯಂನಲ್ಲಿ ಆ.೧೨ರಂದು ನಡೆದ ಏಷ್ಯನ್ ಚಾಂಪಿಯನ್ಸ್ ಟ್ರೋಫಿಯ ಫೈನಲ್ ಪಂದ್ಯದಲ್ಲಿ ಮಲೇಷಿಯಾ ವಿರುದ್ಧ 4-3 ಗೋಲುಗಳ ಮೂಲಕ ಗೆಲುವು ಸಾಧಿಸಿದ ಭಾರತ ನಾಲ್ಕನೇ ಬಾರಿಗೆ ಏಷ್ಯನ್ ಚಾಂಪಿಯನ್ಸ್ ಟ್ರೋಫಿಯನ್ನು ಮುಡಿಗೇರಿಸಿಕೊಂಡಿತು.

ಮೊದಲಾರ್ಧದಲ್ಲಿ ಮಲೇಷಿಯಾ ಆಕ್ರಮಣಕಾರಿ ಆಟವಾಡಿದ್ದರಿಂದ ಭಾರತೀಯರು ಎದುರಾಳಿಯನ್ನು ನಿರ್ಬಂಧಿಸಲು ಕಷ್ಟಪಟ್ಟರು. ಭಾರತ ಒಂಬತ್ತನೇ ನಿಮಿಷದಲ್ಲಿ ಪೆನಾಲ್ಟಿ ಕಾರ್ನರ್ ಮೂಲಕ ಜುಗ್ರಾಜ್ ಸಿಂಗ್ ನೆರವಿನೊಂದಿಗೆ ಮೊದಲ ಗೋಲು ಗಳಿಸಿತು. ಪಂದ್ಯ ಮುಂದುವರೆದಂತೆ ನಿಧಾನರಾದಂತೆ ಕಂಡುಬಂದ ಭಾರತೀಯ ಆಟಗಾರರು ತದನಂತರ ಆದ್ಬುತವಾಗಿ ಕಂಬ್ಯಾಕ್ ಮಾಡಿದರು. ಹರ್ಮನ್ ಪ್ರೀತ್ ಸಿಂಗ್ (45ನೇ ನಿಮಿಷ) ಗುರುಜಂತ್ ಸಿಂಗ್ (45ನೇ ನಿಮಿಷ) ಮತ್ತು ಆಕಾಶ್ ದೀಪ್ ಸಿಂಗ್ (56ನೇ ನಿಮಿಷ)ದಲ್ಲಿ ಗೋಲು ಗಳಿಸಿ ಭಾರತದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದರು.



















































































error: Content is protected !!
Scroll to Top