ಜ್ಯೋತಿ ರಮೇಶ್‌ಗೆ ಬೋಳೂರು ಹರೀಶ್ಚಂದ್ರ ಆಚಾರ್ಯ ಪ್ರಶಸ್ತಿ

ಕಾರ್ಕಳದ ವಸಂತ್‌ ಆಚಾರ್ಯ, ಉಗ್ಗಪ್ಪು ಅವರಿಗೂ ಪ್ರಶಸ್ತಿ

ಕಾರ್ಕಳ : ನ್ಯೂಸ್‌ ಕಾರ್ಕಳದ ಜಾಹೀರಾತು ವಿಭಾಗದ ಮುಖ್ಯಸ್ಥರಾಗಿರುವ ಜ್ಯೋತಿ ರಮೇಶ್‌ ಸೇರಿ ವಿವಿಧ ಕ್ಷೇತ್ರಗಳಲ್ಲಿ ಗಣನೀಯ ಸಾಧನೆ ಮಾಡಿರುವ ಕಾರ್ಕಳದ ಮೂವರನ್ನು ವಿಶ್ವಕರ್ಮ ಸಹಕಾರ ಬ್ಯಾಂಕ್‌ ಬೋಳೂರು ಹರೀಶ್ಚಂದ್ರ ಆಚಾರ್ಯ ಪ್ರಶಸ್ತಿ ನೀಡಿ ಗೌರವಿಸಿದೆ. ಕಾರ್ಕಳದ ವಸಂತ್‌ ಆಚಾರ್ಯ (ಶಿಕ್ಷಣ) ಮತ್ತು ಉಗ್ಗಪ್ಪು (ದೈವ ನರ್ತನ) ಪ್ರಶಸ್ತಿ ಪಡೆದುಕೊಂಡಿರುವ ಉಳಿದಿಬ್ಬರು. ಜ್ಯೋತಿ ರಮೇಶ್‌ ಅವರಿಗೆ ಸಾಮಾಜಿಕ ಕ್ಷೇತ್ರದಲ್ಲಿ ಸಲ್ಲಿಸಿದ ಸೇವೆಗಾಗಿ ಈ ಗೌರವ ಲಭಿಸಿದೆ. ಮಂಗಳೂರಿನ ಶ್ರೀ ಕಾಳಿಕಾಂಬಾ ವಿನಾಯಕ ದೇವಸ್ಥಾನದ ಸಭಾಂಗಣದಲ್ಲಿ ಶನಿವಾರ ನಡೆದ ವಿಶ್ವಕರ್ಮ ಸಹಕಾರ ಬ್ಯಾಂಕಿನ 48ನೇ ವಾರ್ಷಿಕ ಮಹಾಸಭೆಯಲ್ಲಿ ಈ ಮೂವರನ್ನು ಪ್ರಶಸ್ತಿ ನೀಡಿ ಸನ್ಮಾನಿಸಲಾಯಿತು.


ದ.ಕ. ಜಿಲ್ಲಾ ಚಿನ್ನದ ಕೆಲಸಗಾರರ ಸಂಘ, ವಿಶ್ವಕರ್ಮ ಯುವ ವೇದಿಕೆಯ ವತಿಯಿಂದ ಹಾಗೂ ಕೆಎಂಸಿ ಆಸ್ಪತ್ರೆಯ ಸಹಕಾರದೊಂದಿಗೆ ಉಚಿತ ಹೃದ್ರೋಗ ತಪಾಸಣಾ ಮತ್ತು ರಕ್ತದಾನ ಶಿಬಿರ ಇದೇ ವೇಳೆ ನಡೆಯಿತು.


ವಿಶ್ವಕರ್ಮ ಸಹಕಾರ ಬ್ಯಾಂಕಿನ ಅಧ್ಯಕ್ಷ ಡಾ. ಎಸ್.‌ ಆರ್‌. ಹರೀಶ್‌ ಆಚಾರ್ಯ ಅಧ್ಯಕ್ಷತೆ ವಹಿಸಿದ್ದರು. ಉಪಾಧ್ಯಕ್ಷ ಡಿ. ಭಾಸ್ಕರ ಆಚಾರ್ಯ, ನಿರ್ದೇಶಕರಾದ ಲೋಕೇಶ್‌ ಆಚಾರ್ಯ, ಪಿ. ಜಗದೀಶ್‌ ಆಚಾರ್ಯ, ಎಸ್.‌ ಜಯಶ್ರೀ ವಿ. ಆಚಾರ್ಯ, ಬೆಳುವಾಯಿ ಸೀತಾರಾಮ ಆಚಾರ್ಯ, ಜಗದೀಶ ಕೆ., ಜಯಪ್ರಕಾಶ್‌ ಆಚಾರ್ಯ, ರೇಷ್ಮಾ ಆಚಾರ್ಯ, ಶರತ್‌ ಕೆ. ಆಚಾರ್ಯ, ಹರಿಪ್ರಸಾದ್‌, ಎನ್.‌ ಗೋಪಾಲಕೃಷ್ಣ ಆಚಾರ್‌, ಬಿ. ಗುರುಪ್ರಸಾದ್‌ ಶೆಟ್ಟಿ, ಮತ್ತು ಭರತ್‌ ನೀಡ್ಪಳ್ಳಿ ಮೊದಲಾದವರು ಉಪಸ್ಥಿತರಿದ್ದರು.



















































































error: Content is protected !!
Scroll to Top