ಕಾರ್ಕಳ : ಎಂ.ಪಿ.ಎಂ. ಸರಕಾರಿ ಪ್ರಥಮ ದರ್ಜೆ ಕಾಲೇಜಿನ ವಾಣಿಜ್ಯ ಶಾಸ್ತ್ರ ವಿಭಾಗದ ಸಹಾಯಕ ಪ್ರಾಧ್ಯಾಪಕ ವಿದ್ಯಾಧರ ಹೆಗ್ಡೆ ಅವರು ಮಂಡಿಸಿರುವ “ಆ್ಯಟಿಡ್ಯೂಡ್ ಆ್ಯಂಡ್ ಬಿಹೇವಿಯರ್ ಆಫ್ ಪಾಲಿಸಿ ಹೋಲ್ಡರ್ಸ್ ಟುವಡ್ಸ್ ಮೈಕ್ರೋ ಇನ್ಶುರೆನ್ಸ್: ಎ ಸ್ಟಡಿ ಇನ್ ದಕ್ಷಿಣ ಕನ್ನಡ ಆ್ಯಂಡ್ ಉಡುಪಿ ಡಿಸ್ಟ್ರಿಕ್ಟ್ ಆಫ್ ಕರ್ನಾಟಕ” ಎಂಬ ಪ್ರೌಢ ಪ್ರಬಂಧಕ್ಕೆ ಮಂಗಳೂರು ವಿಶ್ವವಿದ್ಯಾನಿಲಯ ಡಾಕ್ಟರೇಟ್ ಪದವಿ ನೀಡಿದೆ.
ವಿದ್ಯಾಧರ್ ಅವರು ಮಂಗಳೂರು ವಿಶ್ವವಿದ್ಯಾನಿಲಯ ಕಾಲೇಜಿನ ವಾಣಿಜ್ಯ ಶಾಸ್ತ್ರ ವಿಭಾಗದ ಪ್ರಾಧ್ಯಾಪಕರಾಗಿರುವ ಡಾ. ಸುಭಾಷಿಣಿ ಶ್ರೀ ವತ್ಸಾಯವರ ಮಾರ್ಗದರ್ಶನದಲ್ಲಿ ಪ್ರಬಂಧ ಸಿದ್ಧಪಡಿಸಿದ್ದರು. ಇವರು ಹೆಬ್ರಿ ತಾಲೂಕಿನ ರಂಗನಮಕ್ಕಿ ದಿ. ಚೆನ್ನಪ್ಪ ಹೆಗ್ಡೆ ಹಾಗೂ ದಿ. ಬುಕ್ಕಿ ಹೆಗ್ಗಡ್ತಿಯವರ ಪುತ್ರ.








































