ಕಾರ್ಕಳ : ಕಿನ್ನಿಗೋಳಿ ಸಮೀಪ ಮೂರುಕಾವೇರಿ ಎಂಬಲ್ಲಿ ಆಲ್ಟೋ ಕಾರು ಮತ್ತು ಟಿಪ್ಪರ್ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿದ್ದು, ಪರಿಣಾಮ ಕಾರಿನಲ್ಲಿದ್ದ ಬೆಳ್ವಾಯಿಯ ಮಾರ್ನಾಡು ರಾಮಣ್ಣ ಆಚಾರ್ಯ (45) ಸ್ಥಳದಲೇ ಮೃತಪಟ್ಟಿದ್ದಾರೆ. ಕಾರಿನಲ್ಲಿ ಒಟ್ಟು ಐವರು ಪ್ರಯಾಣಿಸುತ್ತಿದ್ದು ಅವರಲ್ಲಿ ಇಬ್ಬರಿಗೆ ಗಂಭೀರ ಗಾಯವಾಗಿದೆ. ಗಾಯಗೊಂಡವರು ಸುರತ್ಕಲ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಮೂಲ್ಕಿಯಲ್ಲಿ ಮರದ ಕೆಲಸ ಮುಗಿಸಿಕೊಂಡು ಮರಳಿ ಮನೆಗೆ ಬರುತ್ತಿದ್ದ ವೇಳೆ ಮೂರುಕಾವೇರಿ ಎಂಬಲ್ಲಿ ದುರಂತ ಸಂಭವಿಸಿದೆ.
































