ನಾಯಿಮರಿ ತಪ್ಪಿಸಿಕೊಂಡು ಹೋದದ್ದಕ್ಕೆ ಪೊಲೀಸರನ್ನೇ ಅಮಾನತು ಮಾಡಲು ಹೇಳಿದ ಜಡ್ಜ್‌

ಹೈಕೋರ್ಟ್‌ ಜಡ್ಜ್‌ ಕ್ರಮಕ್ಕೆ ಭಾರಿ ಟೀಕೆ

ಹೊಸದಿಲ್ಲಿ : ತನ್ನ ಮನೆಯ ನಾಯಿಮರಿ ತೆರೆದಿಟ್ಟ ಗೇಟಿನ ಮೂಲಕ ಹೊರಗೆ ಹೋಗಿ ತಪ್ಪಿಸಿಕೊಂಡಿರುವುದರಿಂದ ಕೆಂಡಾಮಂಡಲವಾದ ಹೈಕೋರ್ಟ್‌ ನ್ಯಾಯಾಧೀಶರು ಮನೆಯಲ್ಲಿ ಕಾವಲು ಕರ್ತವ್ಯ ನಿರ್ವಹಿಸುತ್ತಿರುವ ಪೊಲೀಸರನ್ನು ಕಿತ್ತುಹಾಕಬೇಕೆಂದು ಹೇಳಿರುವ ಘಟನೆ ಭಾರಿ ವಿವಾದಕ್ಕೊಳಗಾಗಿದೆ.
ಸುಮಾರು ಒಂದು ತಿಂಗಳ ಹಿಂದೆ ನಡೆದ ಘಟನೆ ಈಗ ಬೆಳಕಿಗೆ ಬಂದು ನ್ಯಾಯಾಧೀಶರ ವರ್ತನೆ ಟೀಕೆಗೊಳಗಾಗಿದೆ. ದಿಲ್ಲಿ ಹೈಕೋರ್ಟಿನಿಂದ ಇತ್ತೀಚೆಗೆ ಕಲ್ಕತ್ತ ಹೈಕೋರ್ಟಿಗೆ ವರ್ಗಾವಣೆಯಾಗಿರುವ ನ್ಯಾಯಾಧೀಶ ಗೌರಂಗ್‌ ಕಾಂತ್‌ ಅವರ ನಾಯಿಮರಿ ತೆರೆದಿಟ್ಟ ಗೇಟಿನಿಂದ ಹೊರಗೆ ಹೋಗಿ ವಾಪಸು ಬಂದಿಲ್ಲ. ಅದು ನಾಪತ್ತೆಯಾಗಿದೆಯೋ ಅಥವಾ ವಾಹನದ ಅಡಿಗೆ ಬಿದ್ದು ಸತ್ತಿದೆಯೋ ಎಂದು ಗೊತ್ತಾಗಿಲ್ಲ.
ಆದರೆ ನಾಯಿಮರಿ ಗೇಟಿನಿಂದ ಹೊರಗೆ ಹೋಗಲು ಕಾವಲಿಗಿರುವ ಪೊಲೀಸ್‌ ಕಾನ್‌ಸ್ಟೆಬಲ್‌ ನಿರ್ಲಕ್ಷ್ಯ ಕಾರಣ ಎಂದು ಕೆಂಡಾಮಂಡಲವಾದ ಜಸ್ಟಿಸ್‌ ಕಾಂತ್‌ ಜೂನ್‌ 12ರಂದು ದಿಲ್ಲಿ ಪೊಲೀಸ್‌ ಕಮಿಷನರ್‌ಗೆ ಈ ಕಾನ್‌ಸ್ಟೆಬಲ್‌ ಅನ್ನು ಅಮಾನತುಮಾಡಬೇಕೆಂದು ಹೇಳಿ ಪತ್ರ ಬರೆದಿದ್ದಾರೆ. ಬಂಗಲೆಯ ಗೇಟ್‌ ಹಾಕದಿರುವುದನ್ನು ಗಂಭೀರವಾದ ಕರ್ತವ್ಯಲೋಪ ಮತ್ತು ನಿರ್ಲಕ್ಷ್ಯದ ಪರಮಾವಧಿ ಎಂದಿರುವ ಅವರು ತಕ್ಷಣ ಕ್ರಮ ಕೈಗೊಳ್ಳಲು ಆಗ್ರಹಿಸಿದ್ದರು. ನಿನ್ನೆ ಈ ಪತ್ರ ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆದ ಬಳಿಕ ನ್ಯಾಯಾಧೀಶರ ವರ್ತನೆ ಬಗ್ಗೆ ವ್ಯಾಪಕ ಟೀಕೆ ಕೇಳಿಬಂದಿದೆ. ನ್ಯಾಯಾಧೀಶರು ತನ್ನ ನಾಯಿಮರಿ ಬಗ್ಗೆ ವಹಿಸಿದ ಕಾಳಜಿಯ ಅರ್ಧದಷ್ಟನ್ನಾದರೂ ಈ ದೇಶದ ಜನಸಾಮಾನ್ಯರಿಗಾಗಿ ವಹಿಸಿದ್ದರೆ ದೇಶ ಹೀಗಿರುತ್ತಿರಲಿಲ್ಲ ಎಂದು ಹಲವರು ನ್ಯಾಯಾಧೀಶರ ಕಾಲೆಳೆದಿದ್ದಾರೆ.



















































































error: Content is protected !!
Scroll to Top