ಬೆಳ್ಮಣ್ ಜೇಸಿಐ ಘಟಕಕ್ಕೆ ರಾಷ್ಟ್ರಾಧ್ಯಕ್ಷರ ಭೇಟಿ – ನೂತನ ಮನೆ ಹಸ್ತಾಂತರ

ಬೆಳ್ಮಣ್‌ : ಅಂತರಾಷ್ಟ್ರೀಯ ಭಾರತಿಯ ಜೇಸಿಐನ ವಲಯ ಹದಿನೈದರ ಘಟಕಗಳಲ್ಲಿ ಒಂದಾದ 43 ವರ್ಷಗಳ ಸುದೀರ್ಘ ಇತಿಹಾಸವಿರುವ ಬೆಳ್ಮಣ್ ಜೇಸಿಐ ಘಟಕಕ್ಕೆ ಭಾರತೀಯ ಜೇಸಿಐನ ರಾಷ್ಟ್ರಧ್ಯಕ್ಷ ಕಾರ್ತಿಕೇಯನ್ ಎಂ.ಎನ್. ಅವರು ಭೇಟಿ ನೀಡಿ, ಬೆಳ್ಮಣ್ ಜೇಸಿಐ ಘಟಕವು ತನ್ನ ತಂಡದ ಸಾಧನೆಯಿಂದಾಗಿ ರಾಷ್ಟ್ರ ಮಟ್ಟದಲ್ಲಿ ಗುರುತಿಸಿಕೊಂಡಿದೆ ಎಂದರು. ಬಳಿಕ ದಾನಿಗಳ ಮುಖಾಂತರ ನಿರ್ಮಾಣಗೊಂಡಿರುವ ನೂತನ ಮನೆಯನ್ನು ಉದ್ಘಾಟಿಸಿ ಮನೆಯವರಿಗೆ ಹಸ್ತಾಂತರಿಸಿದರು.

ಗೌರವ ಸಮರ್ಪಣೆ
ಬೆಳ್ಮಣ್‌ ಜೇಸಿಐ ವತಿಯಿಂದ ದಾನಿಗಳಾದ ವಾಸ್ತು ತಜ್ಞ ಹಾಗೂ ಜ್ಯೋತಿಷ್ಯರಾದ ಗುರೂಜಿ ಡಾ. ಆಚಾರ್ಯ ಜಿ. ವಾದಿರಾಜ್ ದಂಪತಿಗಳನ್ನು ಭಾರತೀಯ ಜೇಸಿಐನ ರಾಷ್ಟ್ರಧ್ಯಕ್ಷ ಸನ್ಮಾನಿಸಿ ಗೌರವಿಸಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಬೆಳ್ಮಣ್ಣ್ ಜೇಸಿಐ ಘಟಕದ ಅಧ್ಯಕ್ಷ ಅಬ್ಬನಡ್ಕ ಸತೀಶ್ ಪೂಜಾರಿ ವಹಿಸಿದ್ದರು. ವೇದಿಕೆಯಲ್ಲಿ ವಲಯಾಧ್ಯಕ್ಷ ಪುರುಷೋತ್ತಮ ಶೆಟ್ಟಿ, ವಲಯಉಪಾಧ್ಯಕ್ಷ ಬೋಳ ಸುಧಾಕರ ಆಚಾರ್ಯ, ಅಭಿಲಾಷ್, ಜಯಶ್ರೀ ಮಿತ್ರ ಕುಮಾರ್, ಬೆಳ್ಮಣ್ಣ್ ಜೇಸಿಐ ಘಟಕದ ಪೂರ್ವಾಧ್ಯಕ್ಷ ಮುರಳೀಧರ ಜೋಗಿ, ರವಿರಾಜ್ ಶೆಟ್ಟಿ, ಸದಸ್ಯರಾದ ಮಾಯಾ ಸಿ. ರಾವ್, ಶ್ವೇತಾ ಆಚಾರ್ಯ, ವೀಣಾ ಆಚಾರ್ಯ, ಅನಿತಾ ಪೂಜಾರಿ, ಪದ್ಮಶ್ರೀ ಪೂಜಾರಿ, ಸುರೇಶ್ ಪೂಜಾರಿ ಕಾಸ್ರಬೈಲು ಸೇರಿದಂತೆ ವಲಯ ಹಲವಾರು ನಿರ್ದೇಶಕರುಗಳು, ಸಂಯೋಜಕರು ಕಾರ್ಯಕ್ರಮದಲ್ಲಿ ಉಪಸ್ಥಿತಿತರಿದ್ದರು.

ಯುವ ಜೇಸಿ ಸಪ್ತಾಹದ ಉದ್ಘಾಟನೆ

ಯುವಜೇಸಿ ಸಪ್ತಾಹವನ್ನು ಪೂರ್ವ ವಲಯ ಉಪಾಧ್ಯಕ್ಷ ಸತ್ಯನಾರಾಯಣ ಭಟ್ ಅವರು ಉದ್ಘಾಟಿಸಿದರು. ಬೆಳ್ಮಣ್ಣು ಯುವ ಜೇಸಿ ಅಧ್ಯಕ್ಷ ಕೀರ್ತನ್ ಪೂಜಾರಿ ಬೋಳ ಅಧ್ಯಕ್ಷತೆ ವಹಿಸಿದ್ದು, ಮಂಜರಪಲ್ಕೆ ವೃದ್ದಾಶ್ರಮ ಹಾಗೂ ಬೋಳ ಪದವು ನಿವಾಸಿಯೋರ್ವರಿಗೆ ಆಹಾರ ಕಿಟ್ ವಿತರಿಸಲಾಯಿತು. ನಿಕಟ ಪೂರ್ವಾಧ್ಯಕ್ಷ ವೀಣೇಶ್ ಅಮೀನ್, ಪೂರ್ವಾಧ್ಯಕ್ಷ ಸಂದೀಪ್ ವಿ. ಪೂಜಾರಿ, ಸದಸ್ಯರಾದ ದಿನೇಶ್ ಪೂಜಾರಿ ಬೀರೊಟ್ಟು, ಅನ್ನಪೂರ್ಣ ಕಾಮತ್, ಪದ್ಮಶ್ರೀ ಪೂಜಾರಿ, ವೀಣಾ ಆಚಾರ್ಯ, ಸುರೇಶ್ ಅಬ್ಬನಡ್ಕ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.



















































































error: Content is protected !!
Scroll to Top