ಯಕ್ಷತೀರ್ಥ ಸಂಭ್ರಮ 2023 : ಯಕ್ಷಗಾನದ ಆಮಂತ್ರಣ ಪತ್ರಿಕೆ ಬಿಡುಗಡೆ

ಕಾರ್ಕಳ : ಯಕ್ಷತೀರ್ಥ ಸಂಭ್ರಮ 2023ರ ಯಕ್ಷಗಾನದ ಆಮಂತ್ರಣ ಪತ್ರಿಕೆಯನ್ನು ಜೈನಕಾಶಿ ಮೂಡುಬಿದಿರೆ ಸ್ವಸ್ಥೀ ಶ್ರೀ ಚಾರುಕೀರ್ತಿ ಭಟ್ಟಾರಕ ಮಹಾಸ್ವಾಮೀಜಿಯವರ ಅನುಗ್ರಹ ಆರ್ಶೀವಾದಗಳೊಂದಿಗೆ ಬಿಡುಗಡೆಗೊಳಿಸಿದ ಬಳಿಕ ಕಲೆ ಸಂಸ್ಕೃತಿಯ ಬಗ್ಗೆ ಆರ್ಶೀವಚನ ನೀಡಿದರು. ಆ. 27 ರಂದು ನಡೆಯಲಿರುವ ಯಕ್ಷಗಾನ ಕಾರ್ಯಕ್ರಮಕ್ಕೆ ಶುಭ ಹಾರೈಸಿದರು.

ಈ ಸಂದರ್ಭದಲ್ಲಿ ಮೂಡುಬಿದಿರೆ ಕಾಳಿಕಾಂಬಾ ದೇವಸ್ಥಾನದ ಆಡಳಿತ ಮೊಕ್ತೇಸರ ಜಯಕರ್ ಪುರೋಹಿತ್, ಶ್ರೀ ವಿಶ್ವಕರ್ಮ ಸಮಾಜ ಸೇವಾ ಸಂಘದ ಅಧ್ಯಕ್ಷ ವಾಮನ ಆಚಾರ್ಯ, ಹಿರಿಯ ಯಕ್ಷಗಾನ ಸಂಘಟಕ ಮಹಾವೀರ ಪಾಂಡಿ ಕಾಂತಾವರ, ಜಿ. ಎಸ್.ಪುರಂದರ ಪುರೋಹಿತ್ ಮುನಿಯಾಲು, ಸೀತಾರಾಮ ಆಚಾರ್ಯ ಮೂಡುಬಿದಿರೆ, ಜಗದೀಶ್ ಆಚಾರ್ಯ ಬೇಲಾಡಿ, ದಾಮೋದರ ಆಚಾರ್ಯ ಮತ್ತು ಸಹೋದರರು ನೂರಾಳ್ ಬೆಟ್ಟು, ಪ್ರಶಾಂತ್ ಆಚಾರ್ಯ ನೂರಾಳ್ ಬೆಟ್ಟು ಹಾಗೂ ಕಾರ್ಯಕ್ರಮದ ಆಯೋಜಕ ಸದಾನಂದ ಎಸ್. ಆಚಾರ್ಯ ಯಕ್ಷತೀರ್ಥ ಕಲಾಸೇವೆ ನೂರಾಳಬೆಟ್ಟು ಉಪಸ್ಥಿತರಿದ್ದರು.























































error: Content is protected !!
Scroll to Top