ಜೇಸೀಸ್ ಶಾಲೆಯಲ್ಲಿ ಸಾಹಿತ್ಯ ಸಂಘ ಉದ್ಘಾಟನೆ

ಕಾರ್ಕಳ : ವಿದ್ಯಾರ್ಥಿ ಜೀವನದಲ್ಲಿ ದೊರೆಯುವ ಅವಕಾಶಗಳೇ ಭವಿಷ್ಯದ ಸಾಧನೆಯ ಮೆಟ್ಟಿಲುಗಳು. ಅವಕಾಶಗಳನ್ನು ಸದುಪಯೋಗಪಡಿಸಿಕೊಂಡಾಗ ಮಾತ್ರ ನಿಶ್ಚಿತ ಗುರಿ ತಲುಪಲು ಸಾಧ್ಯ. ವಿದ್ಯಾರ್ಥಿಗಳಲ್ಲಿ ಸಾಹಿತ್ಯ ಕ್ಷೇತ್ರದ ಅಭಿರುಚಿ ಮತ್ತು ಆತ್ಮವಿಶ್ವಾಸವನ್ನು ಹೆಚ್ಚಿಸುವಲ್ಲಿ ಶಾಲೆಯಲ್ಲಿ ದೊರೆಯುವ ಸಾಹಿತ್ಯ ಸಂಘದಂತಹ ವೇದಿಕೆಯ ಪಾತ್ರ ಮಹತ್ತರವಾದುದು ಎಂದು ಎಸ್‌ವಿಟಿ ಯ ನಿವೃತ್ತ ಪ್ರಾಂಶುಪಾಲೆ ಮಿತ್ರಪ್ರಭಾ ಹೆಗ್ಡೆ ಹೇಳಿದರು. ಅವರು ಜೂ. 30 ರಂದು ಜೇಸೀಸ್ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಸಾಹಿತ್ಯ ಸಂಘ ಉದ್ಘಾಟಿಸಿ ಮಾತನಾಡಿ, ನಡೆಯುವಾಗ ಎಡವದೆ, ಕುಳಿತಾಗ ಎಡಹುವರೇ ಎಂಬಂತೆ ಸೋಲಿಗೆ ಹೆದರದೆ ತಮ್ಮ ಪ್ರತಿಭಾ ಅನಾವರಣಕ್ಕೆ ದೊರೆಯುವ ವೇದಿಕೆಯ ಅವಕಾಶಗಳನ್ನು ಸದುಪಯೋಗ ಪಡಿಸಿಕೊಳ್ಳಿ ಎಂದು ವಿದ್ಯಾರ್ಥಿಗಳಿಗೆ ಶುಭ ಹಾರೈಸಿದರು.

ಈ ಸಂದರ್ಭ ಶಾಲಾ ಹಿರಿಯ ಶಿಕ್ಷಕಿ ರೀಟಾ, ಆಡಳಿತಾಧಿಕಾರಿ ಪೂನಂ ಕಾಮತ್‌ ಮತ್ತು ವಿದ್ಯಾರ್ಥಿ ನಾಯಕಿ ಸುಧೀಕ್ಷಾ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಮುಖ್ಯ ಶಿಕ್ಷಕಿ ಸುರೇಖಾ ರಾಜ್ ಸ್ವಾಗತಿಸಿದರು. ವಿದ್ಯಾರ್ಥಿನಿ ನಂದಿನಿ ಕಾರ್ಯಕ್ರಮ ನಿರೂಪಿಸಿ, ಆಶಿಕಾ ವಂದಿಸಿದರು. ಬಳಿಕ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.



















































































error: Content is protected !!
Scroll to Top