ಜ್ಞಾನಸುಧಾದ
2 ಸಾವಿರದೊಳಗಿನ ರ್‍ಯಾಂಕ್‌ಗಳ ಸಂಖ್ಯೆ 43ಕ್ಕೆ ಏರಿಕೆ
ಕಾರ್ಕಳ : ತಾಂತ್ರಿಕ ದೋಷದಿಂದಾಗಿ ತಡೆಹಿಡಿಯಲಾದ ಕೆ-ಸಿಇಟಿ ಪರೀಕ್ಷೆಯ ಫಲಿತಾಂಶದಲ್ಲಿ (ಇಂಜಿನಿಯರಿಂಗ್ ವಿಭಾಗ) ಕಾರ್ಕಳ ಜ್ಞಾನಸುಧಾ ಪದವಿ ಪೂರ್ವ ಕಾಲೇಜಿನ ನಿಶಾಂತ್ ಎನ್. ಹೆಗ್ಡೆ 1072 (ಜಿ 55)ನೇ ರ್‍ಯಾಂಕ್ ಹಾಗೂ ಸಾತ್ವಿಕ್ ಬಿ.ಸಿ. 1387 (ಜಿ 55)ನೇ ರ್‍ಯಾಂಕ್ ಪಡೆಯುವುದರ ಮೂಲಕ ಜ್ಞಾನಸುಧಾದ
2 ಸಾವಿರದೊಳಗಿನ ರ್‍ಯಾಂಕ್‌ಗಳ ಪಟ್ಟಿ 43ಕ್ಕೆ ಏರಿಕೆಯಾಗಿದೆ. ಜೊತೆಗೆ ಕಾಲೇಜಿನ 24 ವಿದ್ಯಾರ್ಥಿಗಳಿಗೆ ಕೆ-ಸಿಇಟಿ ಇಂಜಿನಿಯರಿಂಗ್ ಸಾವಿರದೊಳಗಿನ ರ್‍ಯಾಂಕ್ ಬಂದಿರುವುದು ಹಾಗೂ ಪ್ರಣವ್ ಗುಜ್ಜರ್ ಕೃಷಿ ವಿಭಾಗದಲ್ಲಿ 6ನೇ ರ್‍ಯಾಂಕ್ ಹಾಗು ಇಂಜಿನಿಯರಿಂಗ್ ವಿಭಾಗದಲ್ಲಿ 68ನೇ ಪಡೆದಿರುವುದನ್ನು ಇಲ್ಲಿ ಸ್ಮರಿಸಬಹುದಾಗಿದೆ

































