ಕಾರ್ಕಳ : ಚಿಕ್ಕಲ್ ಬೆಟ್ಟು ಹಿರ್ಗಾನ ಸ. ಹಿ.ಪ್ರಾ ಶಾಲೆಯಲ್ಲಿ ಕೃಷ್ಣ ಬೆಟ್ಟು ಸುಂದರಿ ಶೆಡ್ತಿ ಚಾರಿಟೇಬಲ್ ಟ್ರಸ್ಟ್ ವತಿಯಿಂದ ಹಳೆ ವಿದ್ಯಾರ್ಥಿ ಶ್ರೀನಾಥ್ ಶೆಟ್ಟಿ ತಮ್ಮ ತಾಯಿಯ ಸ್ಮರಣಾರ್ಥ ವಿದ್ಯಾರ್ಥಿಗಳಿಗೆ ಸತತ 18 ವರ್ಷಗಳಿಂದ ಕೊಡ ಮಾಡುವ ಕಲಿಕಾ ಸಾಮಗ್ರಿಗಳ ವಿತರಣಾ ಕಾರ್ಯಕ್ರಮ ಜೂ. 16 ರಂದು ಜರುಗಿತು.
ಹಿರ್ಗಾನ ಗ್ರಾ. ಪಂ. ಅಧ್ಯಕ್ಷ ಸಂತೋಷ್ ಶೆಟ್ಟಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಈ ಸಂದರ್ಭ ನಿವೃತ್ತ ಶಿಕ್ಷಕ ಜನಾರ್ಧನ ಹೆಗ್ಡೆ, ಕರ್ನಾಟಕ ಬ್ಯಾಂಕಿನ ನಿವೃತ್ತ ಎಂ. ಡಿ ನಾಗರಾಜ ಭಟ್, ನಿವೃತ್ತ ಮುಖ್ಯ ಶಿಕ್ಷಕ ಗೋವಿಂದ ಜೋಗಿ, ಎಸ್‌ಡಿಎಂಸಿ ಅಧ್ಯಕ್ಷ ಸಂಜೀವ ಪೂಜಾರಿ, ಗ್ರಾ.ಪಂ. ಉಪಾಧ್ಯಕ್ಷ ಭವ್ಯ, ಸದಸ್ಯ ದಿನೇಶ ಪೂಜಾರಿ, ಗ್ರಾ. ಪಂ. ಮಾಜಿ ಸದಸ್ಯ ತಾರನಾಥ ಶೆಟ್ಟಿ, ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ದಯಾನಂದ ನಾಯಕ್ ಹಾಗೂ ಶ್ರೀನಾಥ ಶೆಟ್ಟಿ ಮುಂಬೈ ಉಪಸ್ಥಿತರಿದ್ದರು.
ಮುಖ್ಯ ಶಿಕ್ಷಕ ಉದಯ ಶೆಟ್ಟಿ ಬಿ. ಕಾರ್ಯಕ್ರಮ ನಿರೂಪಿಸಿದರು. ಶಿಕ್ಷಕಿಯರಾದ ಅಶ್ವಿನಿ ವಂದಿಸಿದರು. ಆಶಾ ಸಹಕರಿಸಿದರು.
ಚಿಕ್ಕಲ್‌ಬೆಟ್ಟು ಹಿರ್ಗಾನ ಶಾಲೆಯಲ್ಲಿ ಕಲಿಕಾ ಸಾಮಗ್ರಿಗಳ ವಿತರಣೆ


































