ಸುನಿಲ್‌ ಕುಮಾರ್‌ಗೆ ಬೆನ್ನುನೋವು – ಆಸ್ಪತ್ರೆಗೆ ದಾಖಲು

ಕಾರ್ಕಳ : ಮಾಜಿ ಸಚಿವ, ಕಾರ್ಕಳ ಕ್ಷೇತ್ರದ ಶಾಸಕ ವಿ. ಸುನಿಲ್‌ ಕುಮಾರ್‌ ಅವರು ಬೆನ್ನುನೋವಿನಿಂದ ಬಳಲುತ್ತಿದ್ದು, ಜೂ. 15ರಂದು ಆಸ್ಪತ್ರೆಗೆ ದಾಖಲಾಗಿದ್ದಾರೆ. ಕಳೆದ ಹಲವಾರು ವರ್ಷಗಳಿಂದ ಆಗಿಂದಾಗ್ಗೆ ಸುನಿಲ್‌ ಕುಮಾರ್ ಬೆನ್ನುನೋವಿಗೆ ತುತ್ತಾಗುತ್ತಿದ್ದರು. ಗುರುವಾರ ಬೆನ್ನುನೋವು ಉಲ್ಬಣಗೊಂಡ ಕಾರಣ ಉಡುಪಿಯ ಆಸ್ಪತ್ರೆಗೆ ದಾಖಲಾಗಿದ್ದಾರೆ. ವೈದ್ಯರು ಒಂದು ವಾರಗಳ ಕಾಲ ವಿಶ್ರಾಂತಿಗೆ ಸೂಚಿಸಿ, ಆಸ್ಪತ್ರೆಯಲ್ಲೇ ಇರುವಂತೆ ತಿಳಿಸಿರುವುದರಿಂದ ಸಾರ್ವಜನಿಕ ಸಭೆ ಸಮಾರಂಭಗಳಿಂದ ಅವರು ದೂರ ಉಳಿಯಲಿದ್ದಾರೆ.







































































error: Content is protected !!
Scroll to Top