ಹೆಬ್ರಿ : ಮುದ್ರಾಡಿ ಅಭಯಹಸ್ತೆ ಆದಿಶಕ್ತಿ ಶ್ರೀ ಕ್ಷೇತ್ರದಲ್ಲಿ ಜೂ. 15 ರಂದು ರಾತ್ರಿ ಪಟ್ಟದ ಪಂಜುರ್ಲಿ ನೇಮ ಜರುಗಲಿದೆ. ಭಕ್ತಾಧಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗಿಯಾಗಬೇಕು ಹಾಗೂ ಶ್ರೀ ಕ್ಷೇತ್ರದಲ್ಲಿ 500 ರೂ. ಯಲ್ಲಿ ಹರಕೆಯ ನೇಮ ಮಾಡಿಸಿಕೊಳ್ಳಬಹುದು.
ಜೂ.15ರಂದು ಪಟ್ಟದ ಪಂಜುರ್ಲಿ ನೇಮದ ಸೇವಾದಾರರು ಮುಂಬೈ ಗಣೇಶ್, ಸುಂದರ್ ಕುಮಾರ್, ಸದಾನಂದ ಎಮ್. ಸಾಲಿಯಾನ್, ಬೆಂಗಳೂರು ರಾಜು ಆರ್. ಎಸ್., ನೆಲ್ಲಿಬೆಟ್ಟು ರತಿ ಪೂಜಾರಿ, ಹೆಬ್ರಿ ಚಂದ್ರಶೇಖರ ಮತ್ತು ಮಾತ್ತೃಬೆಟ್ಟು ಪ್ರಶಾಂತ್, ಹೆಚ್ಚಿನ ಮಾಹಿತಿಗಾಗಿ 9900107167 ದೂರವಾಣಿ ಸಂಖ್ಯೆಗೆ ಸಂಪರ್ಕಿಸಬಹುದು ಎಂದು ಕ್ಷೇತ್ರದ ಧರ್ಮಧಿಕಾರಿ ಸುಕುಮಾರ್ ಮೋಹನ್ ಪ್ರಕಟನೆಯಲ್ಲಿ ತಿಳಿಸಿದ್ದಾರೆ.


























