ಕಾರ್ಕಳ : ಆತ್ಮ ಯೋಜನೆಯಡಿ ಕಾಂತಾವರ ಗ್ರಾಮದಲ್ಲಿ ಜೂ. 12ರಂದು ಧನುಶ್ರೀ ಆತ್ಮ ಕಿಸಾನ್ ಗುಂಪಿನ ಸದಸ್ಯರಿಗೆ ಸಾವಯವ ಕೃಷಿ ಹಾಗೂ ದ್ರವರೂಪದ ಗೊಬ್ಬರ ತಯಾರಿ ಕುರಿತು ಮಾಹಿತಿ ಕಾರ್ಯಕ್ರಮ ನಡೆಯಿತು. ಕಾಂತಾವರ ಗ್ರಾ.ಪಂ. ಉಪಾಧ್ಯಕ್ಷ ಸುಧಾಕರ ಪೂಜಾರಿ, ಸದಸ್ಯೆ ಅಮಿತಾ ಪೂಜಾರಿ, ಧನುಶ್ರೀ ಆತ್ಮ ಕಿಸಾನ್ ಗುಂಪು ಕಾಂತಾವರ ಇದರ ಅಧ್ಯಕ್ಷ ಗುಣಕರ ಅಮಿನ್, ದುರ್ಗ ಗ್ರಾ.ಪಂ. ಅಧ್ಯಕ್ಷ ಸತೀಶ್ ನಾಯಕ್ ಮೊದಲಾದವರು ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಆತ್ಮ ಯೋಜನೆಯ ತಾಂತ್ರಿಕ ವ್ಯವಸ್ಥಾಪಕಿ ಚೈತ್ರಾ ಶ್ರೀ ಆತ್ಮ ಯೋಜನೆಯ ಕಾರ್ಯ ಚಟುವಟಿಕೆಯ ಬಗ್ಗೆ ತಿಳಿಸಿದರು. ಪ್ರಗತಿಪರ ಸಾವಯವ ಕೃಷಿಕ ದೀಪಕ್ ಕೆ.ಎಸ್. ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿ ಬೀಜಾಮೃತ, ಜೀವಾಮೃತ ಗೊಬ್ಬರ ತಯಾರಿ ಹಾಗೂ ಅವುಗಳ ಬಳಕೆ ಕುರಿತು ಮಾಹಿತಿ ನೀಡಿದರು.



























