ಕಾರ್ಕಳ : ರೋಟರಿ ಕ್ಲಬ್ ಕಾರ್ಕಳ ವತಿಯಿಂದ ಮಿಯ್ಯಾರು ಕಲ್ಲಗುಪ್ಪೆ ಸ.ಹಿ.ಪ್ರಾ. ಶಾಲೆಗೆ ಜೂ. 10 ರಂದು ಕಂಪ್ಯೂಟರ್ ಕೊಡುಗೆ ನೀಡಲಾಯಿತು.
ಈ ಸಂದರ್ಭ ಕ್ಲಬ್‌ನ ಸದಸ್ಯರಾದ ಇಸ್ರೋ ನಿವೃತ್ತ ವಿಜ್ಞಾನಿ ಜನಾರ್ಧನ ರಾವ್, ನಿವೃತ್ತ ಶಿಕ್ಷಕ ವಸಂತ ಎಂ., ಇಕ್ಬಾಲ್, ಶಾಲಾ ಎಸ್‌ಡಿಎಂಸಿ ಅಧ್ಯಕ್ಷ ವಿಜಯ ಶೆಟ್ಟಿ, ಉಪಾಧ್ಯಕ್ಷೆ ದೀಪ್ತಿ, ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ಸುಜಿತ್ ಕುಮಾರ್, ಕಾರ್ಯದರ್ಶಿ ಸುಮಿತ್ರ ಇ., ಶಾಲಾ ಉಪಸ್ಥಿತರಿದ್ದರು. ಮುಖ್ಯ ಶಿಕ್ಷಕ ಮನೋಹರ ಸ್ವಾಗತಿಸಿದರು. ಸಹ ಶಿಕ್ಷಕಿಯರಾದ ವನಿತಾ ಹೆಗಡೆ ಕಾರ್ಯಕ್ರಮ ನಿರೂಪಿಸಿ, ಗೀತಾ ನಾಯಕ್ ವಂದಿಸಿದರು.
ಕಾರ್ಕಳ ರೋಟರಿ ಕ್ಲಬ್ ವತಿಯಿಂದ ಕಲ್ಲಗುಪ್ಪೆ ಶಾಲೆಗೆ ಕಂಪ್ಯೂಟರ್ ಕೊಡುಗೆ



































