ಮುಂಡ್ಲಿ ಶಾಲೆಯಲ್ಲಿ ಶಾಲಾ ಸಂಸತ್‌ ಚುನಾವಣೆ

ಇವಿಎಂ ಆ್ಯಪ್ ಮೂಲಕ ಮತದಾನ

ಕಾರ್ಕಳ : ಜಾರ್ಕಳ ಮುಂಡ್ಲಿ ಸ.ಹಿ.ಪ್ರಾ.ಶಾಲೆಯಲ್ಲಿ ಜೂ. 10ರಂದು ಶಾಲಾ ಸಂಸತ್‌ ಚುನಾವಣೆ ನಡೆಯಿತು. ವಿದ್ಯಾರ್ಥಿಗಳಲ್ಲಿ ಪ್ರಜಾಪ್ರಭುತ್ವದ ಮಹತ್ವ ಮತ್ತು ಚುನಾವಣೆ ಪ್ರಕ್ರಿಯೆಯ ಅರಿವು ಮೂಡಿಸುವ ನಿಟ್ಟಿನಲ್ಲಿ ಮೊಬೈಲ್‌ನಲ್ಲಿ ಇವಿಎಂ ಆ್ಯಪ್ ಮೂಲಕ ಮತದಾನ ಮಾಡಿಸಲಾಯಿತು. ಚುನಾವಣಾ ಪೂರ್ವಭಾವಿಯಾಗಿ ಚುನಾವಣಾ ಅಧಿಸೂಚನೆ, ನಾಮಪತ್ರ ಸಲ್ಲಿಕೆ, ನಾಮಪತ್ರ ಪರಿಶೀಲನೆ ಪ್ರಕ್ರಿಯೆ ನಡೆಸಲಾಗಿತ್ತು.
ಶಾಲಾ ಮುಖ್ಯ ಶಿಕ್ಷಕಿ ವಿಜಯ ಕುಮಾರಿ ಮುಖ್ಯ ಚುನಾವಣಾಧಿಕಾರಿಯಾಗಿ ಹಾಗೂ ಶಿಕ್ಷಕರಾದ ಆಶಾ, ಪ್ರತಿಭಾ, ಪ್ರಜ್ವಲ್ ಜೈನ್ ಚುನಾವಣಾ ಅಧಿಕಾರಿಗಳಾಗಿ ಕರ್ತವ್ಯ ನಿರ್ವಹಿಸಿದ್ದರು. ಆಶಾ ಕಾರ್ಯಕರ್ತೆ ಯಶೋಧ ಅವರು ಶಾಲಾ ಸಂಸತ್ ಚುನಾವಣೆಯಲ್ಲಿ ಕಾರ್ಯ ನಿರ್ವಹಿಸಿದರು. ಶಾಲಾ ಸಂಸತ್ ನ ನೂತನ ನಾಯಕನಾಗಿ ಯತೀಶ್ ಆಚಾರ್ಯ, ಉಪನಾಯಕಿಯಾಗಿ ಸನ್ನಿಧಿ, ವಿರೋಧ ಪಕ್ಷದ ನಾಯಕಿಯಾಗಿ ಮಧುರ ಆಯ್ಕೆಯಾದರು.

ಚುನಾವಣಾಧಿಕಾರಿಗಳಾಗಿ ಕಾರ್ಯನಿರ್ವಹಿಸಿದ ಶಿಕ್ಷಕರು ಹಾಗೂ ಆಶಾ ಕಾರ್ಯಕರ್ತೆ






































































error: Content is protected !!
Scroll to Top