ರಾಚನಬೆಟ್ಟು ಶ್ರೀ ಜಟ್ಟಿಗೇಶ್ವರ ಭಜನಾ ಮಂಡಳಿ – ಎಸ್ಸೆಸೆಲ್ಸಿ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ

ಉಡುಪಿ : ಜನ್ನಾಡಿ ರಾಚನಬೆಟ್ಟು ಶ್ರೀ ಜಟ್ಟಿಗೇಶ್ವರ ಭಜನಾ ಮಂಡಳಿ ವತಿಯಿಂದ ತಂಡದಲ್ಲಿರುವ ಎಸ್ಸೆಸೆಲ್ಸಿ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಸಮಾರಂಭ ಮೇ 29 ರಂದು ಜರುಗಿತು. 2022-2023 ಶೈಕ್ಷಣಿಕ ಸಾಲಿನಲ್ಲಿ ಶೇ.85 ಅಂಕ ಪಡೆದಿರುವ ಕರ್ನಾಟಕ ಪಬ್ಲಿಕ್ ಸ್ಕೂಲ್ ಬಿದ್ಕಲ್ ಕಟ್ಟೆಯ ವಿದ್ಯಾರ್ಥಿಗಳಾದ ತೃಪ್ತಿ ಕೆ.ಬಿ., ಸೌಮ್ಯ, ನಿಶಾ, ಶ್ರಾವ್ಯ, ಸುದರ್ಶನ್, ವಿನಯ ಅವರಿಗೆ ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಲಾಯಿತು. ತಾಲೂಕು ಭಜನಾ ಒಕ್ಕೂಟದ ಗೌರವಾಧ್ಯಕ್ಷ ಜೈಕರ್ ಪೂಜಾರಿ ಗುಲ್ವಾಡಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಈ ಸಂದರ್ಭ ತಂಡದ ಭಜನಾ ಗುರು ರಾಘವೇಂದ್ರ, ಶಿಕ್ಷಕ ಜಗದೀಶ್ ಹಾಗೂ ಅತುಲ್ ಕುಮಾರ್ ಶೆಟ್ಟಿ ಉಪಸ್ಥಿತರಿದ್ದರು. ಶ್ರೀನಿಧಿ ಹಾಗು ಅನನ್ಯ ಪ್ರಾರ್ಥಿಸಿದರು. ಪ್ರಣಮ್ಯ ಸ್ವಾಗತಿಸಿದರು. ಸುಶೀಲಾ ಪ್ರಾಸ್ತಾವಿಕವಾಗಿ ಮಾತನಾಡಿದರು. ಪಲ್ಲವಿ ಕಾರ್ಯಕ್ರಮ ನಿರ್ವಹಿಸಿದರು.















































\















error: Content is protected !!
Scroll to Top