ನಿಟ್ಟೆ : ಬೆಳಗಾವಿಯ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದಲ್ಲಿ ಮೇ 20 ರಿಂದ 24ರವರೆಗೆ ನಡೆದ 24ನೇ ರಾಜ್ಯಮಟ್ಟದ ಅಥ್ಲೆಟಿಕ್ ಚ್ಯಾಂಪಿಯನ್ಶಿಪ್ನಲ್ಲಿ ನಿಟ್ಟೆ ಮಹಾಲಿಂಗ ಅಡ್ಯಂತಾಯ ಸ್ಮಾರಕ ತಾಂತ್ರಿಕ ಮಹಾವಿದ್ಯಾಲಯದ ಅಥ್ಲೆಟಿಕ್ ಪುರುಷರ ತಂಡವು 7 ಚಿನ್ನದ ಪದಕ, 8 ಬೆಳ್ಳಿಪದಕ ಹಾಗೂ 5 ಕಂಚಿನ ಪದಕಗಳೊಂದಿಗೆ ಶ್ರೇಷ್ಠ ತಂಡ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿದೆ. ಕಾಲೇಜಿನ ಪುರುಷರ ಹಾಗೂ ಮಹಿಳಾ ತಂಡ ಸಮಗ್ರ ಪ್ರಶಸ್ತಿಗಳ ಪೈಕಿ ಎರಡನೇ ಸ್ಥಾನ ಹಾಗೂ ಪಥಸಂಚಲನದಲ್ಲಿ ಪ್ರಥಮ ಸ್ಥಾನವನ್ನು ತನ್ನದಾಗಿಸಿಕೊಂಡಿದೆ.
ರಾಜ್ಯ ಮಟ್ಟದ ಅಥ್ಲೆಟಿಕ್ಸ್ – ನಿಟ್ಟೆ ತಾಂತ್ರಿಕ ಕಾಲೇಜಿಗೆ ತಂಡ ಪ್ರಶಸ್ತಿ





































