ಕಾರ್ಕಳ : ಬಸ್ಸಿಗೆ ಡಿಕ್ಕಿ ಹೊಡೆದು ಕಾರು ಚರಂಡಿಗೆ ಬಿದ್ದ ಘಟನೆ ಮುಂಡ್ಕೂರು ಜಾರಿಗೆಕಟ್ಟೆ ಕ್ರಾಸ್ ಸಮೀಪ ಮೇ 18 ರಂದು ಸಂಭವಿಸಿದೆ. ಬೆಳ್ಮಣ್‌ನಿಂದ ಕಿನ್ನಿಗೋಳಿ ಕಡೆಗೆ ಸಾಗುತ್ತಿದ್ದ ನವದುರ್ಗಾ (KA-19-AD-4279) ಬಸ್ಸಿಗೆ ಸಂಕಲಕರಿಯ ಕಡೆಯಿಂದ ಬರುತ್ತಿದ್ದ (MH-04-LB-5467) ಕಾರು ಡಿಕ್ಕಿ ಹೊಡೆದು ಮುಂದಕ್ಕೆ ಚಲಿಸಿ ಚರಂಡಿಗೆ ಬಿದ್ದಿದೆ, ಪರಿಣಾಮವಾಗಿ ಕಾರಿನಲ್ಲಿದ್ದವರು ಗಾಯಗೊಂಡಿದ್ದು ತಕ್ಷಣವೇ ಬಸ್ಸಿನಲ್ಲಿದ್ದ ಪ್ರಯಾಣಿಕರು ಅವರನ್ನು ಹೊರತೆಗೆದು ಉಪಚರಿಸಿದ್ದಾರೆ. ನಂತರ ಅಲ್ಲಿಗೆ ಬಂದ ಅವರ ಸಂಬಂಧಿಕರು ಗಾಯಾಳುಗಳನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಿರುತ್ತಾರೆ. ಬಸ್ಸಿನಲ್ಲಿದ್ದವರಿಗೆ ಯಾವುದೇ ಅಪಾಯವಾಗಿಲ್ಲ. ಬಸ್ಸ್ ನಿರ್ವಾಹಕ ಗಣೇಶ್ ಅವರು ನೀಡಿದ ಮಾಹಿತಿಯಂತೆ ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.
ಬಸ್ಸಿಗೆ ಡಿಕ್ಕಿ ಹೊಡೆದು ಚರಂಡಿಗೆ ಬಿದ್ದ ಕಾರು


































