ಹೆಬ್ರಿ : ಮಾವಿನಕಾಯಿ ಲೋಡ್ ತುಂಬಿದ್ದ ಗೂಡ್ಸ್ ವಾಹನ ಪಲ್ಟಿಯಾದ ಘಟನೆ ನಾಡ್ಪಾಲು ಗ್ರಾಮದ ಆಗುಂಬೆ ಘಾಟಿಯಲ್ಲಿ ಮೇ 17 ರಂದು ಸಂಭವಿಸಿದೆ. ಚಿತ್ರದುರ್ಗ ಜಿಲ್ಲೆಯ ರಮೇಶ್ ಎಂಬುವವರು ಚಾಲಕ ಅಶೋಕ್ ಮತ್ತು ಮನೋಹರರವರೊಂದಿಗೆ ಗೂಡ್ಸ್ ವಾಹನದಲ್ಲಿ ಮಾವಿನ ಕಾಯಿ ಲೋಡ್ ಮಾಡಿಕೊಂಡು ಉಡುಪಿ ಕಡೆಗೆ ಬರುತ್ತಿರುವಾಗ ನಾಡ್ಪಾಲು ಗ್ರಾಮದ ಆಗುಂಬೆ ಘಾಟಿಯ 11 ನೇ ತಿರುವಿನಲ್ಲಿ ಚಾಲಕನ ನಿಯಂತ್ರಣ ತಪ್ಪಿ ವಾಹನ ಪಲ್ಟಿಯಾಗಿದೆ. ಪರಿಣಾಮವಾಗಿ, ವಾಹನದ ಮುಂದಿನ ಗ್ಲಾಸ್ ಜಖಂಗೊಂಡಿದೆ. ಚಾಲಕ ಅಶೋಕ್ ಮತ್ತು ಮನೋಹರ ಅವರಿಗೆ ತರಚಿದ ಗಾಯವಾಗಿದೆ. ರಮೇಶ್ ನೀಡಿದ ಮಾಹಿತಿಯಂತೆ ಹೆಬ್ರಿ ಪೊಲೀಸ್ ಠಾಣೆಯಲ್ಲಿ ಈ ಕುರಿತು ಪ್ರಕರಣ ದಾಖಲಾಗಿರುತ್ತದೆ.






































