ತಲೆ ಮೇಲೆ ಕಲ್ಲು ಹೊತ್ತು ಹಾಕಿ ಹತ್ಯೆ
ತೀರ್ಥಹಳ್ಳಿ: ಇಬ್ಬರು ಕೂಲಿ ಕಾರ್ಮಿಕರನ್ನು ತಲೆ ಮೇಲೆ ಕಲ್ಲು ಎತ್ತಿ ಹಾಕಿ ಬರ್ಬರವಾಗಿ ಸಾಯಿಸಿರುವ ಘಟನೆ ಇಂದು ಬೆಳಗ್ಗೆ ತೀರ್ಥಹಳ್ಳಿಯಲ್ಲಿ ಬೆಳಕಿಗೆ ಬಂದಿದೆ.ತೀರ್ಥಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪಟ್ಟಣದ ಸಮೀಪದ ಕುರುವಳ್ಳಿಯ ಪುತ್ತಿಗೆ ಮಠದ ಸಮೀಪದ ವಿಶ್ವಕರ್ಮ ಸಮುದಾಯ ಭವನದೊಳಗೆ ನಡೆದಿದೆ.
ಮಂಜಪ್ಪ (45) ಮತ್ತು ಬೀರಪ್ಪ (46) ಹತ್ಯೆಗೀಡಾದ ಕಾರ್ಮಿಕರು. ದಾವಣಗೆರೆ ಮೂಲದ ಕಾರ್ಮಿಕರು ಎನ್ನಲಾಗುತ್ತಿದ್ದು, ರಾತ್ರಿ ಕುಡಿದು ಹಣದ ವ್ಯವಹಾರದಲ್ಲಿ ಈ ಹತ್ಯೆಯ ಘಟನೆ ನಡೆದಿರುವ ಶಂಕೆ ವ್ಯಕ್ತವಾಗಿದೆ.
ಸಮುದಾಯ ಭವನದ ಕೆಲಸಕ್ಕೆ ಬಂದಿದ್ದ ಕಾರ್ಮಿಕರ ಮೇಲೆ ಕಲ್ಲು ಎತ್ತಿ ಹಾಕಿ ಬರ್ಬರವಾಗಿ ಕೊಲೆ ಮಾಡಲಾಗಿದೆ. ಪೊಲೀಸರು ಸ್ಥಳಕ್ಕೆ ಆಗಮಿಸಿ ತನಿಖೆ ನಡೆಸುತ್ತಿದ್ದಾರೆ.





































