ಅರ್ಜುನ್ ಮೇಘವಾಲ್ ನೂತನ ಕಾನೂನು ಸಚಿವ
ಹೊಸದಿಲ್ಲಿ : ದಿಢೀರ್ ಬೆಳವಣಿಗೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಸಂಪುಟದಲ್ಲಿ ಮಹತ್ವದ ಬದಲಾವಣೆ ಮಾಡಲಾಗಿದ್ದು, ಕೇಂದ್ರ ಕಾನೂನು ಸಚಿವ ಕಿರಣ್ ರಿಜಿಜುಗೆ ಗೇಟ್‌ಪಾಸ್ ನೀಡಲಾಗಿದೆ.
ಕೇಂದ್ರ ಕಾನೂನು ಸಚಿವ ಸ್ಥಾನದಿಂದ ಕಿರಣ್ ರಿಜಿಜು ಅವರನ್ನು ಕೈಬಿಟ್ಟು ನೂತನ ಕಾನೂನು ಸಚಿವರಾಗಿ ಅರ್ಜುನ್ ಮೇಘವಾಲ್ ನೇಮಕ ಮಾಡಲಾಗಿದೆ. ಕಿರಣ್ ಬೇರೆ ಇಲಾಖೆಯ ಜವಾಬ್ದಾರಿ ನೀಡುವ ಸಾಧ್ಯತೆ ಇದೆ.ಈ ದಿಢೀರ್ ಬೆಳವಣಿಗೆಗೆ ಏನು ಕಾರಣ ಎಂಬುದನ್ನು ಕೇಂದ್ರ ಸರಕಾರ ಬಹಿರಂಗಪಡಿಸಿಲ್ಲ. ಬೆಳವಣಿಗೆಗೆ ತೀಕ್ಷ್ಣವಾಗಿ ಪ್ರತಿಕ್ರಿಯಿಸಿರುವ ಶಿವಸೇನೆ ಇದು ಮಹಾರಾಷ್ಟ್ರ ಸರಕಾರವನ್ನು ಬೀಳಿಸಿದ ಕುರಿತು ಸುಪ್ರೀಂ ಕೋರ್ಟ್ ನೀಡಿದ ತೀರ್ಪಿನ ಪರಿಣಾಮ ಎಂದಿದೆ. ಈ ನಡುವೆ ಕಾಂಗ್ರೆಸ್ ಯಾರನ್ನು ರಕ್ಷಿಸಲು ಕಾನೂನು ಸಚಿವರನ್ನು ಬದಲಾಯಿಸಲಾಗಿದೆ ಎಂದು ಪ್ರಶ್ನಿಸಿದೆ. ರಿಜಿಜು ಕೈಯಲ್ಲಿ ಪ್ರಸ್ತುತ ಭೂ ವಿಜ್ಞಾನ ಖಾತೆ ಮಾತ್ರ ಇದೆ.





































