ಕಾರ್ಕಳ : ಜಾಗದ ವಿಚಾರವಾಗಿ ಮಗ ತಂದೆಯ ಮೇಲೆ ಹಲ್ಲೆ ಮಾಡಿರುವ ಘಟನೆ ಮೇ 16 ರಂದು ಸಾಣೂರಿನಲ್ಲಿ ಸಂಭವಿಸಿದೆ. ಆಪಾದಿತ ಹರ್ಷಿತ್ ಮನೆಯ ಜಾಗದ ಪಾಲಿನ ವಿಚಾರದಲ್ಲಿ ತಂದೆ ಸಾಧು ಅವರೊಂದಿಗೆ ಗಲಾಟೆ ಮಾಡಿ ಅವರ ಮೇಲೆ ಹಲ್ಲೆ ನಡೆಸಿದ್ದಾನೆ. ಕೋಳಿ ಬಾಲ್‌ನಿಂದ ಸೊಂಟಕ್ಕೆ ತಿವಿದು ಗಾಯಗೊಳಿಸಿರುವುದಲ್ಲದೆ, ಕೈ ಯನ್ನು ಕಚ್ಚಿರುತ್ತಾನೆ. ಹರ್ಷಿತ್‌ನನ್ನು ತಡೆದ ಮನೆಯವರು ಗಾಯಗೊಂಡ ಸಾಧು ಅವರನ್ನು ಚಿಕಿತ್ಸೆಗಾಗಿ ಕಾರ್ಕಳ ಸರಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದು, ಅಲ್ಲಿನ ವೈದ್ಯರ ಸಲಹೆಯಂತೆ ಹೆಚ್ಚಿನ ಚಿಕಿತ್ಸೆಗಾಗಿ ಉಡುಪಿ ಜಿಲ್ಲಾ ಆಸ್ಪತ್ರೆಯಲ್ಲಿ ದಾಖಲಿಸಿದ್ದಾರೆ. ಈ ಕುರಿತು ಕಾರ್ಕಳ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.
ಜಾಗದ ತಕರಾರು : ಮಗನಿಂದಲೇ ತಂದೆಗೆ ಹಲ್ಲೆ





































