6 ದಿನಗಳಲ್ಲಿ ದಿ ಕೇರಳ ಸ್ಟೋರಿ ಸಿನಿಮಾ 68.86 ಕೋ. ರೂ. ಕಲೆಕ್ಷನ್‌

2023ರ ಯಶಸ್ವಿ ಸಿನಿಮಾಗಳ ಪಟ್ಟಿಗೆ ದಿ ಕೇರಳ ಸ್ಟೋರಿ ಚಿತ್ರ ಕೂಡ ಸೇರ್ಪಡೆ ಆಗಿದೆ. ಮೇ 5ರಂದು ಈ ಚಿತ್ರ ಬಿಡುಗಡೆ ಆಯಿತು. ಅಂದಿನಿಂದ ಇಂದಿನವರೆಗೆ ಉತ್ತಮವಾಗಿ ಪ್ರದರ್ಶನ ಮುಂದುವರಿಸಿದೆ. ಇನ್ನೂ ಒಂದಷ್ಟು ದಿನಗಳ ಕಾಲ ಈ ಸಿನಿಮಾದ ಅಬ್ಬರ ಮುಂದುವರಿಯುವುದು ಗ್ಯಾರಂಟಿ ಆಗಿದೆ. ದಿನದಿಂದ ದಿನಕ್ಕೆ ದಿ ಕೇರಳ ಸ್ಟೋರಿ ಸಿನಿಮಾದ ಕಲೆಕ್ಷನ್​ ಹೆಚ್ಚಾಗುತ್ತಲೇ ಇದೆ. ಈ ಸಿನಿಮಾದಲ್ಲಿ ನಟಿ ಅದಾ ಶರ್ಮಾ ಮುಖ್ಯಭೂಮಿಕೆ ನಿಭಾಯಿಸಿದ್ದಾರೆ. ಅವರ ವೃತ್ತಿಜೀವನಕ್ಕೆ ಈ ಸಿನಿಮಾದಿಂದ ಸಖತ್​ ಮೈಲೇಜ್​ ಸಿಕ್ಕಿದೆ. ನಿರ್ದೇಶಕ ಸುದೀಪ್ತೋ ಸೇನ್​ ಅವರ ಖ್ಯಾತಿ ಕೂಡ ಹೆಚ್ಚಾಗಿದೆ. 6 ದಿನಗಳ ಕಾಲ ಯಶಸ್ವಿಯಾಗಿ ಪ್ರದರ್ಶನ ಕಂಡ ದಿ ಕೇರಳ ಸ್ಟೋರಿ ಸಿನಿಮಾ ಈವರೆಗೆ 68.86 ಕೋಟಿ ರೂಪಾಯಿ ಕಲೆಕ್ಷನ್‌ ಮಾಡಿದೆ.

ಬಿಡುಗಡೆಯಾದ ದಿನ ದಿ ಕೇರಳ ಸ್ಟೋರಿ ಚಿತ್ರಕ್ಕೆ 8.3 ಕೋಟಿ ರೂಪಾಯಿ ಕಲೆಕ್ಷನ್​ ಆಗಿತ್ತು. ಎರಡನೇ ದಿನ ಕಲೆಕ್ಷನ್​ ಹೆಚ್ಚಾಯಿತು. ಶನಿವಾರ (ಮೇ 6) ಈ ಸಿನಿಮಾ ಬರೋಬ್ಬರಿ 11.22 ಕೋಟಿ ರೂಪಾಯಿ ಗಳಿಸಿತು. ಮೂರನೇ ದಿನವಾದ ಭಾನುವಾರ 16.40 ಕೋಟಿ ರೂಪಾಯಿ ಕಲೆಕ್ಷನ್​ ಮಾಡುವ ಮೂಲಕ ಗಲ್ಲಾಪೆಟ್ಟಿಗೆಯಲ್ಲಿ ಈ ಸಿನಿಮಾ ಸದ್ದು ಮಾಡಿತು. ಸೋಮವಾರ (ಮೇ 8) ಬಾಕ್ಸ್​ ಆಫೀಸ್​ ಕಲೆಕ್ಷನ್​ ತಗ್ಗಬಹುದು ಎಂದುಕೊಳ್ಳಲಾಗಿತ್ತು. ಆದರೆ ಆ ರೀತಿ ಆಗಲಿಲ್ಲ. ನಾಲ್ಕನೇ ದಿನ ಈ ಸಿನಿಮಾ 10 ಕೋಟಿ ರೂಪಾಯಿ ಗಳಿಸಿತು. ಮಂಗಳವಾರ 11.14 ಕೋಟಿ ರೂಪಾಯಿ ಗಳಿಕೆ ಆಯಿತು. ಬುಧವಾರ ಕೂಡ ಈ ಸಿನಿಮಾದ ಅಬ್ಬರ ನಿಂತಿಲ್ಲ. ಬುಧವಾರ 12 ಕೋಟಿ ರೂಪಾಯಿ ಗಳಿಸುವ ಮೂಲಕ ಒಟ್ಟು ಕಲೆಕ್ಷನ್​ 68.86 ಕೋಟಿ ರೂಪಾಯಿ ಆಗಿದೆ. ಆ ಮೂಲಕ ಗಲ್ಲಾಪೆಟ್ಟಿಗೆಯಲ್ಲಿ ದಿ ಕೇರಳ ಸ್ಟೋರಿ ಸಿನಿಮಾ ತನ್ನ ನಾಗಾಲೋಟ ಮುಂದುವರಿಸಿದೆ.

ಕೇರಳದಲ್ಲಿ ನಡೆದಿದೆ ಎನ್ನಲಾದ ಲವ್​ ಜಿಹಾದ್​ ಮತ್ತು ಮತಾಂತರದ ಘಟನೆಗಳನ್ನು ಆಧರಿಸಿ ಈ ಸಿನಿಮಾ ಸಿದ್ಧವಾಗಿದೆ. ವಿವಾದಾತ್ಮಕ ಕಥಾಹಂದರ ಇರುವುದರಿಂದ ಅನೇಕ ಕಡೆಗಳಲ್ಲಿ ಈ ಸಿನಿಮಾದ ಪ್ರದರ್ಶನಕ್ಕೆ ಅವಕಾಶ ಸಿಕ್ಕಿಲ್ಲ. ಆದರೂ ಕೂಡ ಉತ್ತಮವಾಗಿ ಕಲೆಕ್ಷನ್​ ಮಾಡುವಲ್ಲಿ ಈ ಸಿನಿಮಾ ಹಿಂದೆ ಬಿದ್ದಿಲ್ಲ.

















































error: Content is protected !!
Scroll to Top